ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಹಿಂದೆ ಪ್ರಥಮ ದರ್ಜೆಯಲ್ಲಿ ಅಂಕಗಳನ್ನು ಗಳಿಸುವುದು ಉತ್ತಮ ಎಂದು ಆಗುತ್ತಿತ್ತು. ಆದರೆ ಇಂದು ವಿದ್ಯಾರ್ಥಿಗಳು ನೂರು ಅಂಕ ತೆಗೆದರೂ ಪೋಷಕರಿಗೆ ಸಾಕಾಗುವುದಿಲ್ಲ. ಕೇವಲ ಅಂಕಗಳಿಂದಲೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಅಳೆಯುವ ಪ್ರವತ್ತಿ ಹೆಚ್ಚಾಗಿರುವುದು ದುರದೃಷ್ಟಕರ ರಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅಭಿಪ್ರಾಯ ಪಟ್ಟರು.


ಅವರು ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ಉಳ್ಳಾಲ ಬಿ. ಹೋಬಲಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ-2015 ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಂಕಗಳಿಸುವ ಭರಾಟೆಯಲ್ಲಿ ಸಾಂಸ್ಕøತಿಕ ಕಲೆಗಳಿಗೆ, ಕ್ರೀಡೆಗಳಿಗೆ ಬೆಲೆ ಇಲ್ಲದಂತಾಗಿದೆ. ಮಂಗಳೂರು ನಷ್ಟು ವ್ಯಾಪ್ತಿ ಹೊಂದಿರುವ ಚಿಕ್ಕಪುಟ್ಟ ರಾಷ್ಟರ ಕೂಡಾ ಪದಕಪಟ್ಟಿಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಆದರೆ 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಪದಕಪಟ್ಟಿಯಲ್ಲಿ ತೀರಾ ಹಿಂದುಳಿದಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ನಾವು ಕೇವಲ ಶಿಕ್ಷಣ ಮಾತ್ರವಲ್ಲ ಇದರೊಂದಿಗೆ ಸಾಂಸ್ಕøತಿಕ ಕಲೆಗಳು ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
ಅಲ್ಲದೆ ಟಿ.ವಿ.ಮಾದ್ಯಮಗಳಲ್ಲಿ ಪ್ರದರ್ಶನವಾಗುವ ಡ್ಯಾನ್ಸ್ಗಳೇ ಇಂದು ಪ್ರಮುಖ ಕಲೆಗಳಾಗುತ್ತಿವೆ. ಆದರೆ ನಮ್ಮ ಸಾಂಸ್ಕøತಿಕ ಲೋಕ ವಿಸ್ಕøತವಾಗಿದ್ದು ನಾನಾ ರೀತಿಯ ಸಾಂಪ್ರದಾಯಿಕ ಸಂಸ್ಕøತಿಯ ಬಗೆಗಿನ ಕಲೆಗಾರಿಕೆಯ ಬಗೆಗೆ ಒಲವು ತೋರಿಸುತ್ತಿಲ್ಲ ಎಂದು ಹೇಳಿದರು.
ಬಹಳ ವರ್ಷಗಳ ಹಿಂದೆ ಶಾಲೆಗಳಲ್ಲಿ ಕೂಡಾ ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ಕೊಡಲಾಗುತ್ತಿತ್ತು. ಆದರೆ ಇಂದು ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಕ್ರಸಂತ ಹರೇಕಳ ಹಾಜಬ್ಬ, ಶಿಕ್ಷಣಾಧಿಕಾರಿ ಜ್ಞಾನೇಶ್ವರ್, ತಾ.ಪಂ.ಸದಸ್ಯ ಮಹಮ್ಮದ್ ಮುಸ್ತಫಾ, ಆಯುಕ್ತರಾದ ನಝೀರ್, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ರವೀಂದ್ರ ರೈ, ಪ್ರಕಾಶ್ ಕೋಟ್ಯಾನ್, ಬದ್ರುದ್ದೀನ್, ಅಬ್ದುಲ್ ಸತ್ತಾರ್, ಕಲ್ಯಾಣಿ, ಪ್ರಾನ್ಸಿಸ್, ನಿವೃತ್ತ ಶಿಕ್ಷಕ ಆನಂದ ಅಸೈಗೋಳಿ, ಆರೀಫ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 24 ಶಾಲೆಗಳ 650 ವಿದ್ಯಾರ್ಥಿಗಳು ಭಾಗವಹಿಸಿದ್ದರು.