ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಯುವಜನರು ಅವರ ತತ್ವವನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಸಾಂಸ್ಕøತಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಸೋಮೇಶ್ವರದ ಪರಿe್ಞÁನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಬು ಬೆಳ್ಚಾಡ ಅಭಿಪ್ರಾಯಪಟ್ಟರು.

ಅವರು ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ಜನ್ಮ ಜಯಂತಿಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಪುರುಷೋತ್ತಮ ಅಂಚನ್ ದೇರಳಕಟ್ಟೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ನಾರಾಯಣ ಪೂಜಾರಿ, ರಾಜೀವ ಆಳ್ವ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರೇಮಲತಾ ಆರ್. ಆಳ್ವ , ಮಹಿಳಾ ಮಂಡಲ ಗೌರವಾಧ್ಯಕ್ಷೆ ವಿಶಾಲಾಕ್ಷಿ ಜೆ. ಸೋಮೇಶ್ವರ ಅಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.
ಈ ಸಂದರ್ಭ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಸೋಮೇಶ್ವರ, ಅಶೋಕ್ ಕುಂಪಲ, ಕಿಶೋರ್ ಕುಂಪಲ, ಹರೀಶ್ಚಂದ್ರ ಅಡ್ಕ, ಮನು ಕಟ್ಟೆಮನೆ, ಮಮತ ದಾರಂದ ಬಾಗಿಲು, ಶಾಲಿನಿ ಕುಂಪಲ, ಪ್ರಫುಲ್ಲ ವೆಂಕು ಹಿತ್ಲು, ಸುಕನ್ಯ, ಸುಜಾತ ಕಾಸಿಂಬೆಟ್ಟು ಕೊಲ್ಯ, ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯೆ ಆಶಾಲತಾ ಬೆಳರಿಂಗೆ ಕಿನ್ಯ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ದಿ. ಲಿಂಗಪ್ಪ ಪೂಜಾರಿ ಕನೀರುತೋಟ ಇವರ ಸ್ಮರಣಾರ್ಥ ನೀಡಲಾಗುವ ವರ್ಷದ ಭಜನಾ ಪುರಸ್ಕಾರವನ್ನು ಮುಕೇಶ್ ಅಡ್ಕ, ಯಕ್ಷಗಾನ ತಾಳಮದ್ದಳೆಯಲ್ಲಿ ಚಂಡೆ ಕಲಾವಿದ ಕೀರ್ತನ್ ನಾಯ್ಗ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕೋಶಾಧಿಕಾರಿ ಸೇಸಪ್ಪ ಬೈದ್ಯಮನೆ ವಿವರ ನೀಡಿದರು.
ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ತುಕಾರಾಮ್ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ. ಪಿ. ರಾಮಾನುಜಂ ಪ್ರಸ್ತಾವನೆಗೈದರು. ಸೀತಾರಾಮ ಕರ್ಕೇರ ಸಂದೇಶ ವಾಚಿಸಿದರು. ಜೈ ಕುಮಾರ್ ಪರ್ಯತ್ತೂರು ಮತ್ತು ರಾಘವ ಡಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಸೋಮೇಶ್ವರ ವಂದಿಸಿದರು.