UN NETWORKS
ಉಳ್ಳಾಲ: ನವೋದಯ ಫ್ರೆಂಡ್ಸ್ ಉಳ್ಳಾಲ ಬೈಲ್ ಇದರ ವತಿಯಿಂದ ಚಿಣ್ಣರಿಗಾಗಿ ಚಿತ್ರಕಲಾ ಮತ್ತು ಆವೆ ಮಣ್ಣಿನ ಕಲಾಕೃತಿ ತರಬೇತಿ ಶಿಬಿರ ತೊಕ್ಕೊಟ್ಟು ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ಇತ್ತೀಚೆಗೆ ನಡೆಯಿತು.
ಹಿರಿಯ ಕಲಾವಿದ ಉಮೇಶ್ ಬೋಳಾರ್ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್, ಯೋಗೇಶ್ ಉಳ್ಳಾಲ್, ಭಾಸ್ಕರ್ ಉಳ್ಳಾಲಬೈಲ್, ನಾರಾಯಣ ಉಳ್ಳಾಲ್, ಶ್ರೀಲತಾ ಉಳ್ಳಾಲ್ ಬೈಲ್, ಮಹೇಶ್ ಉಳ್ಳಾಲ್ ಬೈಲ್, ಸದಾಶಿವ ಉಳ್ಳಾಲ್ ಬೈಲ್, ನವೋದಯ ತಂಡದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಮತ್ತು ಚಿಣ್ಣರು ಉಪಸ್ಥಿತರಿದ್ದರು.
ಈ ಸಂದರ್ಭ ಕಲಾವಿದ ಉಮೇಶ್ ಬೋಳಾರ್ ಇವರನ್ನು ಸನ್ಮಾನಿಸಲಾಯಿತು. ವಿನಯ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.