ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ಪಾನೀರು: ವಿಶ್ವವಿದ್ಯಾನಿಲಯಗಳಲ್ಲಿ ಕಲೆ ಆಧಾರಿತ ಚಲನಚಿತ್ರಗಳ ಅಧ್ಯಯನದ ಬಗ್ಗೆ ಹೆಚ್ಚಿನ ಒಲವು ನೀಡಬೇಕಿದ್ದು, ವಿದೇಶದ ವಿ.ವಿಗಳಲ್ಲಿ ಹಾಲಿವುಡ್ ಚಿತ್ರಗಳಿಗೆ ಇರುವಂತೆ ಚಲನಚಿತ್ರ ಸಕ್ರ್ಯೂಟ್‍ಗಳ ಸ್ಥಾಪನೆ ದೇಶದಲ್ಲಿಯೂ ಆಗುವ ಮೂಲಕ ಚಲನಚಿತ್ರಗಳು ಮನರಂಜನೆಗೆ ಮಾತ್ರವಲ್ಲ ಯುವಸಮುದಾಯದ ವಿಕಸನಕ್ಕೂ ದಾರಿಯಾಗಬೇಕು ಎಂದು ಮೂರು ರಾಷ್ಟ್ರಪ್ರಶಸ್ತಿ ಪುರಸ್ಕøತ ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ತಿಪಟೂರಿನ ಬಿ.ಯಸ್.ಲಿಂಗದೇವರು ಅಭಿಪ್ರಾಯಪಟ್ಟರು.



ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಸಮೂಹ ಮಾಧ್ಯಮದ ವತಿಯಿಂದ ದೇರಳಕಟ್ಟೆ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮೀಡಿಯ ಫೆಸ್ಟ್ -2016 ಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ಕಾರ್ಖಾನೆಗಳ ರೀತಿಯಲ್ಲಿ ಕಾರ್ಯಚರಿಸುತ್ತಿದೆ. ಶಿಕ್ಷಣ ಪಡೆದುಕೊಂಡವರು ಸಾಮಾನ್ಯ ಜ್ಞಾನವನ್ನು ಪಡೆಯದೆ ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಉಳಿದುಕೊಳ್ಳುತ್ತಿದ್ದಾರೆ. ಇಂದು ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚಲನಚಿತ್ರಗಳು ವೈಯಕ್ತಿಕ ವರ್ತನೆಗಳನ್ನು ಬದಲಾಯಿಸುವತ್ತ ಪ್ರಭಾವ ಬೀರುತ್ತಿದೆ. ಸಿನಿಮಾ ಅಧ್ಯಯನದ ಕಾಲೇಜುಗಳು ಹಲವು ಇದೆ. ಆದರೆ ಚಲನಚಿತ್ರಗಳ ಶಾಸ್ತ್ರೀಯ ಅಭ್ಯಾಸ ಮಾಡುವ ಯಾವುದೇ ಕಾಲೇಜುಗಳಿಲ್ಲ. ಕಲೆ ಆಧಾರಿತವಾಗಿರಬೇಕಾದ ಚಿತ್ರಗಳು ಫ್ಯಾಷನ್ ಆಗಿ ಪರಿವರ್ತನೆಗೊಂಡಿದೆ.
ವಿದ್ಯಾರ್ಥಿಗಳಿಗೆ ಲಾಂಗು-ಮಚ್ಚು, ಪ್ರೀತಿ-ಪ್ರೇಮ, ಪ್ರಿಯತಮೆಗಾಗಿ ಹೋರಾಟ ಇವುಗಳೇ ಚಲನಚಿತ್ರ ಆಗಿಬಿಟ್ಟಿದೆ. ಹೆತ್ತವರು ಮೂರು ಗಂಟೆಯ ಕಾಲ ನಿದ್ರಿಸುವಂತಹ ಚಲನಚಿತ್ರಗಳು ಚಿಂತನೆ ಮೂಡಿಸುವ ಬದಲು ಚಿಂತೆ ಮಾಡುವ ಸ್ಥಿತಿಯನ್ನು ತಲುಪಿವೆ. ಕಲಾತ್ಮಕ ಚಿತ್ರಗಳನ್ನು ತಯಾರಿಸುವವರ ಬದುಕು ಕಷ್ಟದಲ್ಲಿದೆ.ಅದಕ್ಕಾಗಿ ವಿದೇಶಗಳಲ್ಲಿ ಹಾಲಿವುಡ್ ಚಿತ್ರಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಇರುವ ನೀತಿಯಂತೆ ದೇಶದಲ್ಲೂ ವ್ಯಕ್ತಿತ್ವ ವಿಕಸನ ನಡೆಸುವಂತಹ ಕಲಾತ್ಮಕ ಚಲನಚಿತ್ರಗಳಿಗೆ ವಿ.ವಿ.ಗಳಲ್ಲಿ ನೀತಿ ಜಾರಿಯಾಗಬೇಕು. ಈ ಮೂಲಕ ಸರಕಾರದಿಂದ ಕಲಾತ್ಮಕ ಚಿತ್ರ ರಚಿಸುವವರನ್ನು ಪ್ರೋತ್ಸಾಹಿಸುವ ಮೂಲಕ ಯುವಸಮುದಾಯದ ವಿಕಸನ ಸಾಧ್ಯ ಎಂದರು.
ಸಮೂಹ ಮಾಧ್ಯಮ ವಿಭಾಗ ಮುಖ್ಯಸ್ಥ ಪ್ರೊ.ರವಿರಾಜ್ ಕಿಣಿ ಸ್ವಾಗತಿಸಿದರು. ಲಿಯೋರಾ ಡಿಕುನ್ಹಾ ಮತ್ತು ನೀಲ್ ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ರಿತಿಕಾ ` ನಾನು ಅವನಲ್ಲ ಅವಳು’ ಚಿತ್ರದ ಕುರಿತು ಮಾಹಿತಿ ನೀಡಿದರು. ದೀಕ್ಷಿತಾ ಪ್ರಶಾಂತ್ ವಂದಿಸಿದರು.