ಉಳ್ಳಾಲ : ನಗರ ಸಭೆ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಶಶಿಕಲಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

ಪೌರಾಯುಕ್ತ ನವೀನ್ ಹೆಗ್ಡೆ, ಕೌನ್ಸಿಲರ್ ಖಲೀಲ್ , ಇಸ್ಮಾಯಿಲ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ರೋಹಿನಾಥ್, ತೆರಿಗೆ ವಿಭಾಗದ ನಿರೀಕ್ಷಕ ಚಂದ್ರ ಹಾಸ್, ಇಂಜಿನಿಯರ್ ತುಳಸಿ ದಾಸ್, ಕೌನ್ಸಿಲರ್ ಜಬ್ಬಾರ್, ಅಸ್ಗರ್, ಮುಸ್ತಫಾ, ಅಝೀಝ್, ಗೀತಾ ಬಾಯಿ, ರಮೀಝ್ ಮತ್ತಿತರರು ಉಪಸ್ಥಿತರಿದ್ದರು.










