Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ತಲಪಾಡಿ

ಉಚ್ಚಿಲ ಹೊಳೆಗೆ ತ್ಯಾಜ್ಯ ಸ್ಥಳೀಯರ ಪ್ರತಿಭಟನೆ

UllalaVaniBy UllalaVaniMay 29, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲ ಸೇತುವೆಯಿಂದ ಅಕ್ರಮ ಕಸಾಯಿಖಾನೆ, ಕೋಳಿ ಅಂಗಡಿಗಳ ತ್ಯಾಜ್ಯ ಸೇರಿದಂತೆ ಕೊಳೆತ ವಸ್ತುಗಳನ್ನು ಉಚ್ಚಿಲ ಹೊಳೆಗೆ ಹಾಕುವುದರಿಂದ ಸ್ಥಳೀಯವಾಗಿ ಅನಾರೋಗ್ಯ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳಿಯಾಡಳಿತ ಶ್ರೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ಹಾಕಿದ ವಸ್ತುಗಳು,ಹೊಳೆಯಲ್ಲಿ ಶೇಖರಣೆಗೊಂಡು ಕೊಳೆತ ತ್ಯಾಜ್ಯದಲ್ಲಿ ಹುಳಗಳು ಆಗಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ನಿತ್ಯ ಉಪಯೋಗದ ನೀರಿನ ಬಾವಿಗಳು ಕಲುಷಿತಗೊಂಡಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು.

uchil ptbataneರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ತಾಣವಾಗಿರುವ ಉಚ್ಚಿಲ ಸೇತುವೆಯಲ್ಲಿ ತಲಪಾಡಿ, ಕೋಟೆಕಾರ್, ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಕೋಳಿ ಅಂಗಡಿಗಳ ತ್ಯಾಜ್ಯ ಅಕ್ರಮ ಕಸಾಯಿಖಾನೆಯ ತ್ಯಾಜ್ಯ, ಕ್ಯಾಟರಿಂಗ್ ನಡೆಸುವವರು ತ್ಯಾಜ್ಯವನ್ನು ಇದೇ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರೊಂದಿಗೆ ಕೇರಳದಿಂದ ಬರುವ ವಾಹನಗಳು ತ್ಯಾಜ್ಯವನ್ನು ಇದೇ ಸ್ಥಳದಿಂದ ಹಾಕುವುದರಿಂದ ಸಂಪೂರ್ಣ ಪ್ರದೆಶ ತ್ಯಾಜ್ಯದಿಂದ ತುಂಬಿದ್ದು, ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ದೇರಳಕಟ್ಟೆ ಮಾಡೂರು ಹಾದಿಯಾಗಿ ಬರುವ ಹೊಳೆ ಬಟ್ಟಪಾಡಿ ಹಿನ್ನೀರು ಪ್ರದೇಶದ ಮೂಲಕ ಸಾಗರಕ್ಕೆ ಸಂಗಮವಾಗುವುದು .೩ಕೀ.ಮೀ. ವಿಸ್ತಾರವಾದ ಈ ಹೊಳೆಯ ನೀರು ಸಂಪೂರ್ಣ ಕಲುಷಿತಗೊಂಡು ತ್ಯಾಜ್ಯಗಳು ತುಂಬಿ ಕೊಳೆತು ನೀರಿನಲ್ಲಿ ಹುಳ ತುಂಬಿ ತೇಲಾಡುತ್ತಿದೆ.ಇದರಿಂದ ಸುತ್ತಮುತ್ತಲ ಸುಮಾರು ೫೦ ಮಿಕ್ಕಿ ಮನೆಗಳ ಬಾವಿ ಸಮೇತ ನೀರು ಕಲುಷಿತಗೊಂಡಿದ್ದೆ ಬಾವಿಯ ನೀರಿನಲ್ಲಿ ತೈಲದಂತಹ ಪೊರೆ ಕಾಣಿಸಿಕೊಂಡಿದ್ದು ಜನರು ಭೀತಿಗೊಳಗಾಗಿದ್ದಾರೆ ಇಂತಹ ನೀರನ್ನು ಕುಡಿಯುವ ಮೂಲಕ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ಅಂತಕ ಪಡುತ್ತಿದ್ದಾರೆ. ಈ ಪ್ರದೇಶದಲ್ಲಿ ನಾಯಿಗಳು ರಾತ್ರ್ರಿ ಹಗಲು ಕೊಳೆತ ತ್ಯಾಜ್ಯ ತಿನ್ನಲು ಆಗಮಿಸುವುದರಿಮದ ಸ್ಥಳೀಯರು ನಡೆದಾಡಲು ತೊಂದರೆಯಾಗುತ್ತಿದೆ ಸ್ಥಳೀಯರಾದ ರಾಮ್ಪ್ರಸಾದ್ ಮಯ್ಯ ಮಾತನಾಡಿ ಕಳೆದ ೪ ವರುಷಗಳಿಂದ ಈ ಹೊಳೆಯ ನೀರಿಗೆ ತ್ಯಾಜ್ಯ ಬಿಸಾಕುವ ಪ್ರವೃತ್ತಿ ನಡೆಯುತ್ತಿದೆ.ಹಲವಾರು ಬಾರಿ ಕೊಳೆತ ತ್ಯಾಜ್ಯ ಬಿಸಾಕುವವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಈ ಕುರಿತು ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸೋಮೇಶ್ವರ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ ಪಂಚಾಯತ್ ೬ ಕೋಳಿ ಅಂಗಡಿಗಳಿಗೆ ಮಾತ್ರ ಪರವಾನಿಗೆ ನೀಡಿದ್ದು, ಬೇರೆ ಕಡೆಗಳಿಂದ ತ್ಯಾಜ್ಯವನ್ನು ಇಲ್ಲಿಸುರಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಪಂಚಾಯತ್ನಿಂದ ಸಂಬಂಽತ ಇಲಾಖೆಗೆ ಮನವಿ ನೀಡಿದ್ದೇವೆ ಎಂದರು.

ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ತಲಪಾಡಿ-ಉಚ್ಚಿಲ ಎರಡು ನದಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಪ್ರದೇಶಕ್ಕೇ ಆರೋಗ್ಯ ಸಚಿವರೇ ಖುದ್ದು ಬಂದು ನೋಡ ಬೇಕಾಗಿದೆ. ಈ ಬಗ್ಗೆ ಇನ್ನೂ ಗಮನ ಹರಿಸದ ಪಕ್ಷದಲ್ಲಿ ತೀವ್ರ ತರದ ಹೋರಾಟವನ್ನು ನಡೆಸಲಾಗುವುದು ಎಂದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜಯಕಿರಣ, ಕೆಸಿಎನ್‌ ಛಾನೆಲ್ ಪತ್ರಕರ್ತ ರವಿ ನಾಯ್ಕಾಪು ಅವರಿಗೆ ʻಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿʼ

July 22, 2025

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕೆ.ಸಿ. ರೋಡ್ ಶಾಖೆಯ ಗ್ರಾಹಕರ ಸಭೆ

July 19, 2025

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ

July 18, 2025
Leave A Reply

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ವಿವಾಹಿತೆ ಆತ್ಮಹತ್ಯೆ

By UllalaVaniJuly 29, 20250

ಬೆಳ್ತಂಗಡಿ: ವಿವಾಹಿತೆ ಮಹಿಳೆ ಆತ್ಮಹತ್ಯೆ ನಡೆಸಿರುವ ಘಟನೆ ವೇಣೂರು ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯಲ್ಲಿ ಸಂಭವಿಸಿದೆ.ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡವರು.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ

July 29, 2025

ಶ್ರೀ ಪಾಡಂಗರ ಭಗವತೀ ಕ್ಷೇತ್ರದಲ್ಲಿ ನಾಗರಪಂಚಮಿ

July 29, 2025

ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ನಾಗರ ಪಂಚಮಿ

July 29, 2025
1 2 3 … 1,544 Next
Automatic YouTube Gallery

ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ

ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
Now Playing
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ ...
ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ತೊಕ್ಕೊಟ್ಟು  : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
Now Playing
ತೊಕ್ಕೊಟ್ಟು : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ...
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ಕೋರ‍್ದಬ್ಬು ದೈವಸ್ಥಾನ ದಲ್ಲಿ ನಾಗರಪಂಚಮಿ ಪ್ರಯುಕ್ತ ಮಹಾಪೂಜೆ ನೆರವೇರಿತು.
#Ullalvani #Thokkottu #Kerebailu #Nagarapanchami
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications