ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲ ಸೇತುವೆಯಿಂದ ಅಕ್ರಮ ಕಸಾಯಿಖಾನೆ, ಕೋಳಿ ಅಂಗಡಿಗಳ ತ್ಯಾಜ್ಯ ಸೇರಿದಂತೆ ಕೊಳೆತ ವಸ್ತುಗಳನ್ನು ಉಚ್ಚಿಲ ಹೊಳೆಗೆ ಹಾಕುವುದರಿಂದ ಸ್ಥಳೀಯವಾಗಿ ಅನಾರೋಗ್ಯ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳಿಯಾಡಳಿತ ಶ್ರೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ಹಾಕಿದ ವಸ್ತುಗಳು,ಹೊಳೆಯಲ್ಲಿ ಶೇಖರಣೆಗೊಂಡು ಕೊಳೆತ ತ್ಯಾಜ್ಯದಲ್ಲಿ ಹುಳಗಳು ಆಗಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ನಿತ್ಯ ಉಪಯೋಗದ ನೀರಿನ ಬಾವಿಗಳು ಕಲುಷಿತಗೊಂಡಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ತಾಣವಾಗಿರುವ ಉಚ್ಚಿಲ ಸೇತುವೆಯಲ್ಲಿ ತಲಪಾಡಿ, ಕೋಟೆಕಾರ್, ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಕೋಳಿ ಅಂಗಡಿಗಳ ತ್ಯಾಜ್ಯ ಅಕ್ರಮ ಕಸಾಯಿಖಾನೆಯ ತ್ಯಾಜ್ಯ, ಕ್ಯಾಟರಿಂಗ್ ನಡೆಸುವವರು ತ್ಯಾಜ್ಯವನ್ನು ಇದೇ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರೊಂದಿಗೆ ಕೇರಳದಿಂದ ಬರುವ ವಾಹನಗಳು ತ್ಯಾಜ್ಯವನ್ನು ಇದೇ ಸ್ಥಳದಿಂದ ಹಾಕುವುದರಿಂದ ಸಂಪೂರ್ಣ ಪ್ರದೆಶ ತ್ಯಾಜ್ಯದಿಂದ ತುಂಬಿದ್ದು, ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.
ದೇರಳಕಟ್ಟೆ ಮಾಡೂರು ಹಾದಿಯಾಗಿ ಬರುವ ಹೊಳೆ ಬಟ್ಟಪಾಡಿ ಹಿನ್ನೀರು ಪ್ರದೇಶದ ಮೂಲಕ ಸಾಗರಕ್ಕೆ ಸಂಗಮವಾಗುವುದು .೩ಕೀ.ಮೀ. ವಿಸ್ತಾರವಾದ ಈ ಹೊಳೆಯ ನೀರು ಸಂಪೂರ್ಣ ಕಲುಷಿತಗೊಂಡು ತ್ಯಾಜ್ಯಗಳು ತುಂಬಿ ಕೊಳೆತು ನೀರಿನಲ್ಲಿ ಹುಳ ತುಂಬಿ ತೇಲಾಡುತ್ತಿದೆ.ಇದರಿಂದ ಸುತ್ತಮುತ್ತಲ ಸುಮಾರು ೫೦ ಮಿಕ್ಕಿ ಮನೆಗಳ ಬಾವಿ ಸಮೇತ ನೀರು ಕಲುಷಿತಗೊಂಡಿದ್ದೆ ಬಾವಿಯ ನೀರಿನಲ್ಲಿ ತೈಲದಂತಹ ಪೊರೆ ಕಾಣಿಸಿಕೊಂಡಿದ್ದು ಜನರು ಭೀತಿಗೊಳಗಾಗಿದ್ದಾರೆ ಇಂತಹ ನೀರನ್ನು ಕುಡಿಯುವ ಮೂಲಕ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ಅಂತಕ ಪಡುತ್ತಿದ್ದಾರೆ. ಈ ಪ್ರದೇಶದಲ್ಲಿ ನಾಯಿಗಳು ರಾತ್ರ್ರಿ ಹಗಲು ಕೊಳೆತ ತ್ಯಾಜ್ಯ ತಿನ್ನಲು ಆಗಮಿಸುವುದರಿಮದ ಸ್ಥಳೀಯರು ನಡೆದಾಡಲು ತೊಂದರೆಯಾಗುತ್ತಿದೆ ಸ್ಥಳೀಯರಾದ ರಾಮ್ಪ್ರಸಾದ್ ಮಯ್ಯ ಮಾತನಾಡಿ ಕಳೆದ ೪ ವರುಷಗಳಿಂದ ಈ ಹೊಳೆಯ ನೀರಿಗೆ ತ್ಯಾಜ್ಯ ಬಿಸಾಕುವ ಪ್ರವೃತ್ತಿ ನಡೆಯುತ್ತಿದೆ.ಹಲವಾರು ಬಾರಿ ಕೊಳೆತ ತ್ಯಾಜ್ಯ ಬಿಸಾಕುವವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಈ ಕುರಿತು ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸೋಮೇಶ್ವರ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ ಪಂಚಾಯತ್ ೬ ಕೋಳಿ ಅಂಗಡಿಗಳಿಗೆ ಮಾತ್ರ ಪರವಾನಿಗೆ ನೀಡಿದ್ದು, ಬೇರೆ ಕಡೆಗಳಿಂದ ತ್ಯಾಜ್ಯವನ್ನು ಇಲ್ಲಿಸುರಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಪಂಚಾಯತ್ನಿಂದ ಸಂಬಂಽತ ಇಲಾಖೆಗೆ ಮನವಿ ನೀಡಿದ್ದೇವೆ ಎಂದರು.
ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ತಲಪಾಡಿ-ಉಚ್ಚಿಲ ಎರಡು ನದಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಪ್ರದೇಶಕ್ಕೇ ಆರೋಗ್ಯ ಸಚಿವರೇ ಖುದ್ದು ಬಂದು ನೋಡ ಬೇಕಾಗಿದೆ. ಈ ಬಗ್ಗೆ ಇನ್ನೂ ಗಮನ ಹರಿಸದ ಪಕ್ಷದಲ್ಲಿ ತೀವ್ರ ತರದ ಹೋರಾಟವನ್ನು ನಡೆಸಲಾಗುವುದು ಎಂದರು.