
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆಗಾರಿಕೆ ಉಳ್ಳವನೇ ನಿಜವಾದ ಗುರು ಎಂಬುದಾಗಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಭಿಪ್ರಾಯಪಟ್ಟರು.
ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ 12ನೇ ವರ್ಷದ ಗುರುಕುಲ ಉತ್ಸವದಲ್ಲಿ “ಯಕ್ಷ ಮಂತ್ರ್ಯಕ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುರು ಪರಂಪರೆಯಿಂದ ಬಂದಂತವು, ಸ್ವಾಸ್ಥ್ಯ ಸಮಾಜದ ನಿರ್ಮಾಣ ಗುರುವಿನಿಂದಲೇ ಸಾಧ್ಯ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗಣೇಶ್ ಶೆಣೈ ನೆರವೇರಿಸಿ ಮಾತನಾಡಿ ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಸಭಾಧ್ಯಕ್ಷತೆಯನ್ನು ಶ್ರೀ ರಾಜೇಶ್ ಅತ್ತಾವರ ವಹಿಸಿದ್ದರು, ಶ್ರೀ ಪವಿತ್ರ ಕುಮಾರ್ ಗಟ್ಟಿ, ತ್ಯಾಗಮ್ ಹರೇಕಳ, ಅಮಿತ್ ರಾಜ್ ಬೇಕಲ, ನರೇಶ್ ಪಂಡಿತ್ ಹೌಸ್, ಗುರುಕುಲದ ಗೌರವಾಧ್ಯಕ್ಷೆ ಶ್ರೀಮತಿ ಶಕೀಲಾ ಜನಾರ್ಧನ, ಟ್ರಸ್ಟಿಗಳು ಶ್ರೀಮತಿ ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಅಗಲಿದ ಶಿಷ್ಯೆ ಶೃತಿಯ ನೆನಪಿನಲ್ಲಿ “ಶೃತಿ ಸ್ಮೃತಿ” ಎಂಬ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ದ್ವಾದಶ ತಂಡಗಳ ನೃತ್ಯ ಕಾರ್ಯಕ್ರಮ ನೆರವೇರಿತು.
ಗುರುಕುಲದ ಅಧ್ಯಕ್ಷರು ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು, ಕಿರಣ್ ಉಳ್ಳಾಲ್ ವಂದಿಸಿದರು.