Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

` ಅಲೆದಾಡಿ ಪ್ರಶಸ್ತಿಯನ್ನು ಸ್ವೀಕರಿಸುವ ಗುಣ ತನ್ನದಲ್ಲ’ – ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ

UllalaVaniBy UllalaVaniMay 15, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ: ‘ಬೆನ್ನ ಹಿಂದೆ ಅಲೆದಾಡಿ ಪ್ರಶಸ್ತಿಯನ್ನು ಸ್ವೀಕರಿಸುವ ಗುಣ ತನ್ನದಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಡೆಸಿರುವ ಸಾಧನೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಆದರೆ ಕ್ಷೇತ್ರದಲ್ಲಿನ ಸಾಧನೆ ಪ್ರಶಸ್ತಿ ಸ್ವೀಕರಿಸುವಷ್ಟು ದೊಡ್ಡದಲ್ಲ, ಮುಂದೆಯೂ ಕ್ಷೇತ್ರದಲ್ಲಿ ಸಾಧನೆ ನಡೆಸಬೇಕಿತ್ತು ಎನ್ನುವ ಆಶಯ ತನ್ನಲ್ಲಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಹೇಳಿದ್ದಾರೆ.

02 03 04 07 14ullal1 14ullal   1 DSC_7652 DSC_7657 DSC_7706 DSC_7716 DSC_7719
ಅವರು ಸೋಮೇಶ್ವರ ಅವರ ನಿವಾಸ ಒಲುಮೆ’ಯಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಟಾನ, ವಿಜಯಪುರ ಇದರ ಆಶ್ರಯದಲ್ಲಿ ಜರಗಿದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಪ್ರಶಸ್ತಿ ಮತ್ತು ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಇಂತಹ ಸಂಬಂಧಗಳನ್ನು ಬೆಳೆಸುವ ಕಾರ್‍ಯ ಪ್ರಶಸ್ತಿ ಪ್ರಧಾನ ಸಮಾರಂಭದಿಂದ ನಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಬೇಕಿತ್ತು. ಆದರೂ ಸಾಹಿತ್ಯವನ್ನು ದುಡಿಮೆಯಾಗಿ ತೆಗೆದುಕೊಂಡು ಬಾಳುವುದು ಜೀವನದ ಸಾಧನೆಯಾಗಿದೆ. ಕೃತಜ್ಞತೆ ಭಾವ ವಿಶಿಷ್ಟ ಮೌಲ್ಯವನ್ನು ಹೊಂದಿದೆ. ಅದನ್ನು ಸತ್ಕಾರಗಳ ಮೂಲಕ ಪಡೆಯುವ ಪ್ರಜ್ಞೆ ಎಲ್ಲರಲ್ಲಿರಬೇಕು. ಕೃತಿಗಳನ್ನು ಜಗತ್ತಿನಾದ್ಯಂತ ಬಾಷಾಂತರದ ಮೂಲಕ ಪಸರಿಸುವ ವಿಶ್ವಾಸ ಸಂತಸವನ್ನು ತಂದಿದೆ ಎಂದರು.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನರ್ಮದಾ ಅಮೃತಾ ಸೋಮೇಶ್ವರ ಚಾಲನೆ ನೀಡಿದರು.
ಪ್ರಶಸ್ತಿ ಪ್ರಧಾನ ನಡೆಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಮಾತನಾಡಿ ಆಧುನಿಕ ತಾಂತ್ರಿಕ ಯುಗದಲ್ಲಿ ಯುವಪೀಳಿಗೆಗಳು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಒಲವು ನೀಡುತ್ತಿಲ್ಲ. ಹಿರಿಯ ವಿದ್ವಾಂಸರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಗುರುತಿಸಿ, ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡುವ ಕೆಲಸ ಆಗಬೇಕಿದೆ. ಅಮೃತ ಸೋಮೇಶ್ವರ ಅವರ ಕೃತಿಗಳು ಕನ್ನಡ ಮತ್ತು ತುಳು ಭಾಷೆಯಲ್ಲಿ ಉಳಿಯಬಾರದು. ಕೃತಿಗಳನ್ನು ಇತರೆ ಭಾಷೆಗಳಿಗೆ ಭಾಷಾಂತರ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಿದೆ. ಅಮೃತ ಸೋಮೇಶ್ವರ ಅವರ ಕೃತಿಗಳ ಶಾಶ್ವತವಾಗಿ ಉಳಿಯಬೇಕಾದರೆ, ಅಭಿಮಾನಿಗಳು ಸೇರಿಕೊಂಡು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವರ್ಷಕ್ಕೊಮ್ಮೆ ಉಪನ್ಯಾಸ ಸರಮಾಲೆ ಯನ್ನು ನಡೆಸಲು ಸಮ್ಮತಿ ಮತ್ತು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ವಿ.ವಿ ಮಾಡುತ್ತದೆ ಎಂದ ಅವರು ಅಧ್ಯಯನ ಪೀಠ ಸ್ಥಾಪನೆಗೊಂಡಲ್ಲಿ ಕೃತಿಗಳು ಎಲ್ಲರನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಗೂಡಂಗಡಿ ವ್ಯಾಪಾರದಲ್ಲಿ ರಖಂ ಪ್ರಶಸ್ತಿಗೆ ಪಾತ್ರರಾದವರು : ಮಾತಿಗೆ ಸಿಗುವ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿರುವ ಅಮೃತ ಸೋಮೇಶ್ವರ ಅವರು ಸಾಹಿತ್ಯದಲ್ಲಿ ತನ್ನದು ಗೂಡಂಗಡಿ ವ್ಯಾಪಾರ, ರಖಂ ವ್ಯಾಪಾರಿ ಅಲ್ಲ ಎಂದು ಹೇಳಿದ್ದರು. ಇಂದು ಗೂಡಂಗಡಿ ವ್ಯಾಪಾರ ನಡೆಸಿದ ಅಮೃತರು ರಖಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆದರೆ ರಖಂ ಆಗಿ ಸಾಹಿತ್ಯ ಕ್ಷೇತ್ರದಲ್ಲಿರುವವರು ಗೂಡಂಗಡಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತುಳು ಜಾನಪದ ಜಗತ್ತಿನ ಸಮೃದ್ಧಿ ಶಕ್ತಿಯನ್ನು ಯಾವುದೇ ಉಪಕರಣಗಳಿಲ್ಲದೆ ರಚಿಸಿ ಇನ್ನೂ ೧೦೦ ವರ್ಷಗಳವರೆಗೂ ಜಾಗತಿಕ ಮಾನ್ಯತೆಯನ್ನು ಒದಗಿಸಿದವರು ಅಮೃತಸೋಮೇಶ್ವರ ಅವರು ಮಾತ್ರ ಎಂದು ಅಭಿನಂದನಾ ಭಾಷಣ ಮಾಡಿದ ಮಂಗಳೂರು ವಿ.ವಿ ಕನ್ನಡ ಪ್ರಾಧ್ಯಾಪಕ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಶೋಧಕ ಪ್ರೊ. ಎ.ವಿ. ನಾವಡ, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊನಾಲ್ಡ್ ಎಸ್. ಕ್ಯಾಸ್ಟಲಿನೊ, ಹಲಸಂಗಿ ಗೆಳೆಯರ ಪ್ರತಿಷ್ಠಾನ ,ವಿಜಯಪುರ ಇದರ ಸಂಚಾಲಕ ಡಾ.ಎಸ್.ಕೆ. ಕೊಪ್ಪಾ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮ್ಮರಬ್ಬ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು.
ಎಸ್. ಪ್ರದೀಪ್ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಸ್ತಾವನೆಗೈದರು. ಹಲಸಂಗಿ ಗೆಳೆಯರ ಪ್ರತಿಷ್ಠಾನ ,ವಿಜಯಪುರ ಇದರ ಸದಸ್ಯ ಕಾರ್ಯದರ್ಶಿ ಡಾ. ಸೋಮಶೇಖರ ವಾಲಿ ಮತ್ತು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಸನ್ಮಾನ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮುನ್ನೂರು ಯುವಕ ಮಂಡಲ (ರಿ ) ಕುತ್ತಾರು ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

August 18, 2025

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

August 16, 2025

ಉಳ್ಳಾಲ ನಗರಸಭೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

August 16, 2025
Leave A Reply

Advertise
ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

 ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ

By UllalaVaniAugust 19, 20250

ಕಡಬ : ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ 30 ಕಾಂಡಗಳನ್ನು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಜೀವನದಲ್ಲಿ ಕಲಿಕೆಗೆ ಅಂತ್ಯವಿಲ್ಲ, ಕೌಶಲ್ಯವನ್ನು ಯಶಸ್ಸಿನತ್ತ ಇಚ್ಛಾಶಕ್ತಿಯೊಂದಿಗೆ ಸಂಯೋಜಿಸಿದರೆ, ಯಶಸ್ವಿ ವ್ಯಕ್ತಿಯಾಗುತ್ತೀರಿ : ವಾಲ್ಟರ್ ನಂದಳಿಕೆ

August 19, 2025

ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸುವತ್ತ ವಿದುಷಿ ದೀಕ್ಷಾ ವಿ

August 19, 2025

28 ಹೊಸ ಸರ್ಕಾರಿ ಬಸ್ ರೂಟ್ ಪರ್ಮಿಟ್ : ಆರ್‌ಟಿಎ ಸಭೆಯಲ್ಲಿ ಪರ-ವಿರೋಧ ವಾದ

August 19, 2025
1 2 3 … 1,570 Next
Automatic YouTube Gallery

ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ಸ್ ಮಳಿಗೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ದಾಳಿ

ನಿವಿಯ,ಕಾಸ್ಕೊ,ಯೆನೆಕ್ಸ್ ,ವೈವೈ ಕಂಪನಿಯ ನಕಲಿ ಉತ್ಪನ್ನಗಳ ಮಾರಾಟ;ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ಸ್ ಮಳಿಗೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ದಾಳಿ.ನಕಲಿ ಉತ್ಪನ್ನಗಳು ಪೊಲೀಸರ ವಶಕ್ಕೆ.
ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ಸ್ ಮಳಿಗೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ದಾಳಿ
Now Playing
ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ಸ್ ಮಳಿಗೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ದಾಳಿ
ನಿವಿಯ,ಕಾಸ್ಕೊ,ಯೆನೆಕ್ಸ್ ,ವೈವೈ ಕಂಪನಿಯ ನಕಲಿ ಉತ್ಪನ್ನಗಳ ಮಾರಾಟ;ತೊಕ್ಕೊಟ್ಟಿನ ...
ನಿವಿಯ,ಕಾಸ್ಕೊ,ಯೆನೆಕ್ಸ್ ,ವೈವೈ ಕಂಪನಿಯ ನಕಲಿ ಉತ್ಪನ್ನಗಳ ಮಾರಾಟ;ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ಸ್ ಮಳಿಗೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ದಾಳಿ.ನಕಲಿ ಉತ್ಪನ್ನಗಳು ಪೊಲೀಸರ ವಶಕ್ಕೆ.
ಸವಣೂರು ಪರಿಸರದಲ್ಲಿ ರಣ ಭೀಕರ ಬಿರುಗಾಳಿ... ವಿದ್ಯುತ್ ಕಂಬ, ಅಡಿಕೆ ತೋಟಗಳಿಗೆ ಹಾನಿ.
Now Playing
ಸವಣೂರು ಪರಿಸರದಲ್ಲಿ ರಣ ಭೀಕರ ಬಿರುಗಾಳಿ... ವಿದ್ಯುತ್ ಕಂಬ, ಅಡಿಕೆ ತೋಟಗಳಿಗೆ ಹಾನಿ.
ಸವಣೂರು ಪರಿಸರದಲ್ಲಿ ರಣ ಭೀಕರ ಬಿರುಗಾಳಿ... ವಿದ್ಯುತ್ ಕಂಬ, ಅಡಿಕೆ ತೋಟಗಳಿಗೆ ...
ಸವಣೂರು ಪರಿಸರದಲ್ಲಿ ರಣ ಭೀಕರ ಬಿರುಗಾಳಿ... ವಿದ್ಯುತ್ ಕಂಬ, ಅಡಿಕೆ ತೋಟಗಳಿಗೆ ಹಾನಿ.
#Ullalavani #Savanur
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications