ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಗೆ ರಿಕ್ಷಾದಲ್ಲಿ ಕರೆತಂದು ಕಂಠಪೂರ್ತಿ ಕುಡಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಅಸ್ವಸ್ಥಳಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮಾಡಿದ ಸಾಕ್ಷಾö್ಯಧಾರದ ಮೇಲೆ ಕುಂಪಲ ವಾಸುಕಿನಗರ ಮತ್ತು ಬಗಂಬಿಲ ನಿವಾಸಿ ಇಬ್ಬರು ರಿಕ್ಷಾ ಚಾಲಕರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.





ಉಪ್ಪಳದಲ್ಲಿ ಗೆಳೆಯನ ಜೊತೆಗೆ ಕಳೆದ ಎರಡು ತಿಂಗಳಿನಿAದ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ, ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಸಂಬAಧಿಸಿ ಮುನಿಸಿಕೊಂಡಿದ್ದಳು. ಗೆಳೆಯ ಮನೆಯಿಂದ ಯುವತಿಯನ್ನು ಹೊರಹಾಕಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ಉಪ್ಪಳದಲ್ಲಿ ಮಂಗಳೂರು ತೆರಳುವ ರೈಲನ್ನೇರಿದ್ದಳು. ಉಪ್ಪಳ ದಾಟಿ ರೈಲು ಸೋಮೇಶ್ವರದ ಉಳ್ಳಾಲ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ನಿಲ್ದಾಣದಲ್ಲೇ ಕುಳಿತಿದ್ದಳು. ಅಲ್ಲೇ ರಿಕ್ಷಾ ಚಾಲಕರಾಗಿದ್ದ ಕುಂಪಲ ನಿವಾಸಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಕಷ್ಟಸುಖ ಮಾತನಾಡಿಸಿ, ಕೆಲಸ ಕೊಡಿಸುವುದಾಗಿ ನಂಬಿಸಿರುವ ಮಾಹಿತಿಯಿದೆ. ಅದರಂತೆ ಯುವತಿಯನ್ನು ರಿಕ್ಷಾದಲ್ಲಿ ಕರೆತಂದು ಮುನ್ನೂರು ರಾಣಿಪುರದ ಋಷಿವನ ಮಾರ್ಗವಾಗಿ ನೇತ್ರಾವತಿ ನದಿ ತೀರದತ್ತ ಕೊಂಡೊಯ್ದಿದ್ದಾರೆ. ಅಲ್ಲಿ ತನ್ನ ಗೆಳೆಯರನ್ನು ಕರೆಸಿದ ರಿಕ್ಷಾ ಚಾಲಕ ಕಾರಿನಲ್ಲಿ ಯುವತಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆಯಿದೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟ ಗ್ಯಾಂಗ್ ವಾಪಸ್ಸು ತೆರಳಿದೆ. ಅಸ್ವಸ್ಥಳಾಗಿದ್ದ ಯುವತಿ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ ಹಿನ್ನೆಲೆಯಲ್ಲಿ ಹೊಟ್ಟೆಯುರಿ ತಡೆದುಕೊಳ್ಳಲಾರದೆ, ತಡರಾತ್ರಿ 1.30 ಸುಮಾರಿಗೆ ಮನೆಗಳನ್ನು ಹುಡುಕುತ್ತಾ ನೆರೆಯ ಮನೆಯೊಂದಕ್ಕೆ ತೆರಳಿ ನೀರು ಕೇಳಿದ್ದಾಳೆ. ಮನೆಮಂದಿ ಗಾಬರಿಗೊಂಡು ಸ್ಥಳೀಯರೆಲ್ಲರನ್ನೂ ಕರೆದಿದ್ದಾರೆ. ಅಲ್ಲಿ ಸೇರಿದವರೆಲ್ಲರೂ ಯುವತಿಯನ್ನು ಉಪಚರಿಸಿ ನೀರು ಕುಡಿಸಿ ಹರಿದ ಬಟ್ಟೆಗಳ ಮೇಲೆ ಶಾಲನ್ನು ಹೊದಿಸಿದ್ದಾರೆ. ಅಲ್ಲದೆ ಕುತ್ತಿಗೆ ಮತ್ತು ಕೈಗಳ ಭಾಗದಲ್ಲಿ ಗಾಯಗಳನ್ನು ಗಮನಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿರದ ಯುವತಿ ಬಗ್ಗೆ 112 ಗೆ ಮಾಹಿತಿ ನೀಡಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಯುವತಿಯನ್ನು ಠಾಣೆಗೆ ಕರೆದೊಯ್ದು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಸಾಮೂಹಿಕ ಅತ್ಯಾಚಾರ ಎಂಬುದಾಗಿ ಗಮನಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಯುವತಿ ಮೊಬೈಲಿನಲ್ಲಿ ಕೊನೆಗೆ ರೂ.60 ಬಗಂಬಿಲದ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮಾಡಿರುವುದರ ಜಾಡು ಹಿಡಿದು ಆತನನ್ನು ಹಾಗೂ ಇನ್ನೋರ್ವ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.