ಉಳ್ಳಾಲ : ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಮಂಗಳೂರು ಪ್ರತಿವರ್ಷ ಆಯೋಜಿಸುವ ಉತ್ಥಾನ ಬೇಸಿಗೆ ಶಿಬಿರವು ಇದೇ ಮಾರ್ಚ್ 31 ರಿಂದ ಏಪ್ರಿಲ್ 12ರ ವರೆಗೆ ಬೆಳಿಗ್ಗೆ ಗಂಟೆ 9 ರಿಂದ ಸಂಜೆ 3.30ರ ವರೆಗೆ ನಡೆಯಲಿದೆ. ಮಾರ್ಚ್ 31 ರ ಬೆಳಿಗ್ಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿವೇಕ ಮಂದಿರದಲ್ಲಿ ಉದ್ಘಾಟನೆ ನೆರವೇರಲಿದೆ. ಎಪ್ರಿಲ್ 12 ರಂದು ಶಿಬಿರದಲ್ಲಿ ಮಕ್ಕಳು ಅಭ್ಯಾಸಿಸಿದ ಪ್ರತಿಭೆಗಳನ್ನು ಪ್ರದರ್ಶಿಸುವ ಜೊತೆಗೆ ಸಮಾರೋಪ ಸಮಾರಂಭ ನಡೆಯಲಿದೆ.


4 ವರ್ಷದಿಂದ 15 ವರ್ಷ ವಯಸ್ಸಿನ ಮಕ್ಕಳು ಪಾಲ್ಗೊಳ್ಳಬಹುದಾದ ಈ ಶಿಬಿರದಲ್ಲಿ ಭಾರತೀಯ ಚಿತ್ರಕಲೆ, ಕರಕುಶಲ ತರಬೇತಿ, ಕಸೂತಿ ಕೆಲಸ, ಚಿಂತನಾ ಬೌದ್ಧಿಕ್, ಧ್ಯಾನ, ಶ್ಲೋಕ, ಯೋಗ, ನೃತ್ಯ, ತಬಲ, ಯಕ್ಷಗಾನ, ಸಂಗೀತ, ಕಥಾ ನಿರೂಪಣೆ, ಸ್ವರಕ್ಷಣಾ ತಂತ್ರಗಳು, ಕುಣಿತ ಭಜನೆ, ಬೆಂಕಿ ರಹಿತ ಅಡುಗೆ, ದೇಸೀ ಆಟೋಟಗಳು, ಹಾಸ್ಯ ರಂಜನೆಗಳು ಸೇರಿದಂತೆ ವಿಭಿನ್ನ ಜೋಡಣೆಯಿದೆ.
ರೂ 1500 ಮೊತ್ತದ ಮೂಲಕ ನೋಂದಾವಣೆ ಮಾಡಿಕೊಂಡರೆ ಮಧ್ಯಾಹ್ನದ ಊಟದ ಸಹಿತ ಎಲ್ಲಾ ಸೌಲಭ್ಯಗಳನ್ನು ಆಯೋಜಕರಿಂದಲೇ ನೋಡಿಕೊಳ್ಳಲಾಗುವುದು.
ಭಾರತೀಯ ಸಂಸ್ಕೃತಿ, ಶಿಷ್ಟಾಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಇತರ ಬೇಸಿಗೆ ಶಿಬಿರಕ್ಕಿಂತ ವಿಭಿನ್ನವಾಗಿ ಈ ಉತ್ಥಾನ ಶಿಬಿರವನ್ನು ಸಂಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.
