78 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ತೊಕ್ಕೊಟ್ಟಿನಲ್ಲಿ ಉಳ್ಳಾಲ ತಾಲೂಕಿನ ಪ್ರಪ್ರಥಮ ಪತ್ರಿಕೆ ‘ಉಳ್ಳಾಲವಾಣಿ’ ಲೋಕಾರ್ಪಣೆ

ಉಳ್ಳಾಲ: ಜನರಲ್ಲಿ ಮಾನವೀಯತೆಯ ಕೊಂಡಿಯಾಗಿ ಉಳ್ಳಾಲವಾಣಿ ಪತ್ರಿಕೆ ಕರ್ಯಾಚರಿಸಲಿ. ಪತ್ರಿಕೆ ಮುನ್ನಡೆಸುವ ಜವಾಬ್ದಾರಿ ತಾಲೂಕಿನ ಎಲ್ಲಾ ಜನತೆಗಿದ್ದು, ಎಲ್ಲರ ಆಶೋತ್ತರಗಳಿಗೆ ಪತ್ರಿಕೆ ಸ್ಪಂದಿಸುವಂತಾಗಲಿ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ತಾಲೂಕಿನ ಪ್ರಥಮ ಪತ್ರಿಕೆ ಉಳ್ಳಾಲವಾಣಿಯನ್ನು ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಮೀಟರ್ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಜನರಲ್ಲಿ ಸಮನ್ವಯತೆಯನ್ನು ಕಾಪಾಡಿಕೊಳ್ಳಲು, ಪ್ರತಿ ಆಚಾರ ವಿಚಾರಗಳು, ಪ್ರವಾಸೋದ್ಯಮ, ಸರಕಾರಿ ಯೋಜನೆಗಳು, ಸಾಧಕರನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಜವಾಬ್ದಾರಿ ಪತ್ರಿಕೆಯದ್ದಾಗಿದೆ. ಕ್ಷೇತ್ರದುದ್ದಕ್ಕೂ ಮಾನವೀಯತೆಯ ಜೊತೆಗೆ ಶಾಂತಿ ನೆಲೆಸುವಲ್ಲಿ ಪತ್ರಿಕೆ ಕರ್ಯಾಚರಿಸಲಿ ಎಂದು ಶುಭ ಹಾರೈಸಿದರು.

ಉಳ್ಳಾಲ ವಲಯ ಪ್ರಾಥಮಿಕ , ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸುಮಾರು 16 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.

ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ಬುಲ್, 7 ಶಾಲೆಗಳ ವಿದ್ಯಾರ್ಥಿ ವಾದ್ಯವೃಂದ, ಕೆಎಸ್ಆರ್ಪಿ ಪೊಲೀಸರ ವಾದ್ಯವೃಂದದೊಂದಿಗೆ ಉಳ್ಳಾಲ ಅಬ್ಬಕ್ಕ ಸರ್ಕಲ್ನಿಂದ ತೊಕ್ಕೊಟ್ಟು ಓವರ್ಬ್ರಿಡ್ಜ್ ವರೆಗೆ ಸುಮಾರು ಒಂದು ಕಿ. ಮೀ. ಪಥ ಸಂಚಲನಲ್ಲಿ ಹೆಜ್ಜೆ ಹಾಕಿದರು.

ಪಥಸಂಚಲನದಲ್ಲಿ ತಾಲೂಕು ಕಚೇರಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ನಗರಾಡಳಿತ ಮತ್ತು ಗ್ರಾಮ ಪಂಚಾಯತ್ನ ಸಿಬ್ಬಂದಿ, ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಜನಪ್ರತಿನಿಧಿಗಳೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಪಥಸಂಚಲನದಲ್ಲಿ ಭಾಗವಹಿಸಿದರು.

ಕಾರ್ಯಕ್ರಮಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಳ್ಳಾಲವಾಣಿ ಪತ್ರಿಕೆಯ ಸಂಪಾದಕ ಮೋಹನ್ ಕುತ್ತಾರ್, ಆರೀಫ್ ಕಲ್ಕಟ್ಟ, ಯಶವಂತ್ ಬೇಕಲ್, ಐತಪ್ಪ ಗಟ್ಟಿ, ಅಶ್ವಿನ್ ಕುತ್ತಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಾರ್ಯನಿರ್ವಹಣಾಧಿಕಾರಿ ಗುರುದತ್ತ್

ಉಳ್ಳಾಲ ನಗರಸಭಾ ಪೌರಾಯುಕ್ತೆ ಮುಖ್ಯಾಧಿಕಾರಿ ವಾಣಿ ವಿ. ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ ಜೆ. ಕಾರಗಿ, ದಕ್ಷಿಣ ವಲಯ ಕ್ರ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಹೆಚ್. ಆರ್., ಸೊಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ದೈಹಿಕಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಯು. ಕೆ. ಮೋನು, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಎಚ್. ಎನ್. ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದರೆ, ಹಝ್ರತ್ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ಎರಡು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಿತು.

ಧೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಮತ್ತು ಮೋಹನ್ ಶಿರ್ಲಾಲು, ಹಳೆಕೋಟೆ ಸೈಯ್ಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪತ್ರಿಕೆ ಮುಖಪುಟ ವಾಟ್ಸ್ಯಾಪ್ ಮಾಡಿ
ಆಕರ್ಷಕ ಬಹುಮಾನ ನಿಮ್ಮದಾಗಿಸಿ:
ಉಳ್ಳಾಲವಾಣಿ ಪತ್ರಿಕೆಯ ಮುಖಪುಟವನ್ನು ಉಳ್ಳಾಲವಾಣಿ ಕಚೇರಿ 9845478858 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ, ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಿ. ಮುಖಪುಟದ ಭಾವಚಿತ್ರವನ್ನು ಕಳುಹಿಸಿದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಲಕ್ಕಿ ಡ್ರಾ ಕುರಿತ ಲೈವ್ ಕಾರ್ಯಕ್ರಮವನ್ನು ನಾವು ಕಳುಹಿಸುವ ಉಳ್ಳಾಲವಾಣಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗುವುದು.