
ಉಳ್ಳಾಲ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನಿರ್ದೇಶಕರುಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಉಚ್ಚಿಲಗುಡ್ಡೆಯ ಪಿ.ಎಂ.ಶ್ರೀ ಹಿ.ಪ್ರಾ.ಶಾಲೆ ಯ ಮುಖ್ಯಶಿಕ್ಷಕ ಹರೀಶ್ ಕುಮಾರ್ ಬಿ.ಎಂ, ನಾಲ್ಯಪದವು ಪಿಎಂಶ್ರೀ ಕುವೆಂಪುಶಾಲೆಯ ಜಿಪಿಟಿ ಶಿಕ್ಷಕ ಗಜಾನನ ಶೆಟ್ಟಿ, ಕಾಟಿಪಳ್ಳ ೬ ನೇ ಬ್ಲಾಕ್ ನ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಮಂಗಳೂರು ಉತ್ತರ ವಲಯ ಬಿ ಇ ಆರ್ ಟಿ, ಬಿಆರ್ ಸಿ ಕೇಂದ್ರದ ನಾಗರಾಜ್ ಮದ್ದೋಡಿ, ಕುಪ್ಪೆಪದವು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಾರ್ಕ್ .ಜೆ.ಮೆಂಡೋನ್ಸಾ ಹಾಗೂ ಮುತ್ತೂರು ಕೆಪಿಎಸ್ ಪ್ರೌಢಶಾಲೆಯ ಸಹಶಿಕ್ಷಕ ಬಾಲಕೃಷ್ಣ ನಾಯ್ಕ್ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಆಯ್ಕೆಗೊಂಡ ಎಲ್ಲಾ ನಿರ್ದೇಶಕರುಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಮಂಗಳೂರು ದಕ್ಷಿಣ ವಲಯ ಸಮಿತಿ ಅಭಿನಂದನೆ ಸಲ್ಲಿಸಿದೆ.