ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತೊಕ್ಕೋಟ್ಟು ಶಾಖಾ ಕಚೇರಿಯಲ್ಲಿ ಕಳೆದ 14ವರ್ಷ ಎರಡು ತಿಂಗಳ ಸೇವೆ ಸಲ್ಲಿಸಿದ ಸುಧಾಕರ್.ಪಿ. ವಾಮಂಜೂರು ಇದೀಗ ಮುಂಭಡ್ತಿಯಾಗಿ ಎಡಪದವು ಹತ್ತಿರದ ಮುತ್ತೂರು ಶಾಖಾ ಕಚೇರಿಗೆ ಪದೊನ್ನತಿ ವರ್ಗಾವಣೆಯಾಗಿದ್ದಾರೆ,
ಅವರಿಗೆ ವರ್ಗಾವಣೆ ಬೀಳ್ಕೊಡುಗೆ ಗೌರವವನ್ನು ಶಾಖಾ ಕಚೇರಿಯವರು ಮತ್ತು ತೊಕ್ಕೋಟ್ಟು ಭಟ್ನಗರದ ನಾಗರಿಕರು ಶನಿವಾರ ನಡೆಸಿದರು.

ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತೊಕ್ಕೋಟ್ಟು ಶಾಖಾ ಕಚೇರಿಯ ಹಿರಿಯ ಪ್ರಬಂಧಕರಾದ ರಾಜೇಶ್ ಕುಮಾರ್ ರೈ ವರ್ಗಾವಣೆ ಪತ್ರ ವಿತರಿಸಿ ಸುಧಾಕರ್ ಕಳೆದ 14 ವರ್ಷದಿಂದ ಈ ಶಾಖಾ ಕಚೇರಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ, ಮುಂದೆಯೂ ಹೀಗೆ ಸೇವೆ ಸಲ್ಲಿಸಿ ಯೂನಿಯನ್ ಬ್ಯಾಂಕಿಗೆ ಉತ್ತಮ ಹೆಸರು ತರಲಿ ಎಂದು ಶುಭ ಹಾರೈಸಿದರು.
ತೊಕ್ಕೊಟ್ಟು ಭಟ್ನಗರದ ನಾಗರಿಕರು ಸಾಮಾಜಿಕ ಸೇವಾ ಕರ್ತ ಸಿರಿಲ್ ರಾಬರ್ಟ್ ಡಿ ಸೋಜ, ಮೋಹನ್ ಬಂಗೇರ ಭಟ್ನಗರ ವೇಣು ಗೋಪಾಲ್, ಬ್ಯಾಂಕ್ ಕಟ್ಟಡದ ಮಾಲಕಿ ಶ್ರೀಮತಿ ಮೇರಿ, ಪೊಸಕುರಲ್ ಬಳಗದ ನಿರ್ದೇಶಕ ವಿಧ್ಯಾಧರ್ ಶೆಟ್ಟಿ ಮೊದಲಾದವರು ಸುಧಾಕರ್. ಪಿ ಅವರನ್ನು ಸನ್ಮಾನಿಸಿ ಶುಭಾಶಯ ತಿಳಿಸಿದರು.
ಯೂನಿಯನ್ ಬ್ಯಾಂಕ್ ಶಾಖಾ ಪ್ರಬಂಧಕರಾದ ಶ್ರೀ ಮತಿ ದಯಾವತಿ, ಸಿಬ್ಬಂದಿ ಶ್ರೀ ಮತಿ ಕವಿತಾ, ಗಂನಂ ದೇವ್, ಶ್ರೀ ಮತಿ ಪೂರ್ಣಿಮಾ ಶಾಖಾ ಕಚೇರಿಯ ಪರವಾಗಿ ಅಭಿನಂದನೆ ಸಲ್ಲಿಸಿ ಸುಧಾಕರ್.ಪಿ ವಾಮಂಜೂರು ಅವರ ಭವಿಷ್ಯದ ವೃತ್ತಿ ಬದುಕು ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.
ಕಳೆದ 14 ವರ್ಷದಿಂದ ನಮ್ಮ ಬ್ಯಾಂಕಿಗೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ನೀಡಿದ್ದೇನೆ, ಗ್ರಾಹಕರು ಬ್ಯಾಂಕಿಗೆ ಬಂದು ತೊಂದರೆಗೆ ಒಳಗಾಗದಂತೆ ನಾನು ಕಾರ್ಯ ನಿರ್ವಹಿಸಿದ್ದೇನೆ, ಮುಂದೆಯೂ ಇದೇ ರೀತಿ ಸೇವೆ ಸಲ್ಲಿಸುತ್ತೇನೆ, ತನಗೆ ತೋರಿಸಿದ ಅಭಿಮಾನ ಪ್ರೀತಿಗೆ ಧನ್ಯವಾದ ಎಂದು ಸುಧಾಕರ್ ವಾಮಂಜೂರು ತಿಳಿಸಿದರು.