




ಉಳ್ಳಾಲ: ವಿದ್ಯಾರ್ಥಿಗಳ ಜೀವನಶೈಲಿ ಸುಧಾರಣೆಗಾಗಿ ಸಂಸ್ಥೆಗಳು ನೀಡಿರುವ ಸಮಯ ಅಮೂಲ್ಯವಾದುದು. ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸುವ ಮುಖೇನ ಉತ್ತಮ ನಾಗರಿಕರಾಗಿರಿ ಎಂದು ಮಂಜನಾಡಿ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಕವಿತಾ ನಾಯ್ಕ ಅಭಿಪ್ರಾಯಪಟ್ಟರು
ಅವರು ಉಳ್ಳಾಲವಾಣಿ ಕನ್ನಡಪತ್ರಿಕೆ, ಲೈಫ್ ನೆಸ್ಟ್ ಟ್ರಸ್ಟ್ ಹಾಗೂ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಸಹಯೋಗದೊಂದಿಗೆ ಜರಗಿದ ಹದಿಹರೆಯದ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಷಯಗಳು, ಶಬ್ದ ಮಾಲಿನ್ಯ ಹಾಗೂ ಮಾನಸಿಕ ವಿಷಯಗಳ ಕುರಿತು ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿದರು.
ಕ್ಷೇಮ ಆಸ್ಪತ್ರೆಯ ಇಎನ್ ಟಿ ತಜ್ಞೆ ಡಾ.ವೈಷ್ಣವಿ ಶಬ್ದ ಮಾಲಿನ್ಯದ ಕುರಿತು ಎಚ್ಚರಿಕೆ ಹಾಗೂ ಜಾಗೃತಿಯ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಈ ಸಂದರ್ಭ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಮಂಜನಾಡಿ ಮುಖ್ಯೋಪಾಧ್ಯಾಯಿನಿ ಸುರೇಖಾ, ಇಎನ್ ಟಿ ತಜ್ಞೆ ಡಾ.ವೈಷ್ಣವಿ, ಮನೋತಜ್ಞರಾದ ಸುಲೋಚನಾ, ಸ್ತ್ರೀರೋಗ ತಜ್ಞೆ ಡಾ.ದ್ರವ್ಯ ಹೆಗ್ಡೆ, ಇಎನ್ ಟಿ ವಿಭಾಗದ ಡಾ. ಸಂಚಿತ, ಮಾರುಕಟ್ಟೆ ವಿಭಾಗದ ಅಕ್ಷಯ್ ಮತ್ತು ಅನಿಲ್ ಹಾಗೂ ಲೈಫ್ ನೆಸ್ಟ್ ಟ್ರಸ್ಟ್ ನ ಅಚಲ್ ಭಟ್ ಹಾಗೂ ಯಶವಂತ್ ರಾವ್ ಉಪಸ್ಥಿತರಿದ್ದರು.