ಉಳ್ಳಾಲ : ಉಳ್ಳಾಲ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಸಿಕ ಸಭೆ ಹಾಗೂ ಸೌಹಾರ್ದ ದೀಪಾವಳಿ ಆಚರಣೆ ತೊಕ್ಕೊಟ್ಟು ಕಲ್ಲಾಪುವಿನ ಕಾರುಣ್ಯ ಸದನದಲ್ಲಿ ವಿಶಿಷ್ಟವಾಗಿ ನಡೆಯಿತು.
ಮಂಡಲದ ಪ್ರತಿಯೋರ್ವ ಸದಸ್ಯರು ಹಬ್ಬದ ಆಚರಣೆ ಪ್ರಯುಕ್ತ ಮನೆಯಿಂದ ತಯಾರಿಸಲಾದ, ಸಿಹಿತಿಂಡಿಗಳನ್ನು ತಂದು ಸಹಭೋಜನ ನಡೆಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.
ಉಳ್ಳಾಲ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಂಕೇತವಾದ ದೀಪಾವಳಿ, ಎಲ್ಲರ ಮನಗಳನ್ನು ಬೆಳಗಲಿ. ಈ ಮೂಲಕ ಎಲ್ಲರೊಂದಿಗೆ ಬೆರೆಯುವ ಮನಸ್ಸುಗಳು ಉದಯವಾಗಲಿ. ಒಟ್ಟು ಹಬ್ಬದ ಆಚರಣೆ ಎಲ್ಲರನ್ನು ಆರೋಗ್ಯ, ಸುಖ, ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಮಹಿಳಾ ಮಂಡಲಗಳ ಒಕ್ಕೂಟದ ಕಮಲ ಗೌಡ, ಕಾರ್ಯದರ್ಶಿ ಜೆಸಿಂತ , ಜೊತೆ ಕಾರ್ಯದರ್ಶಿ ತುಳಸಿ ಗಟ್ಟಿ, ಸದ್ಯಸರಾದ ಝೀನತ್ ,ಸಾಹಿತಿ ಸಿಹಾನ, ಪ್ರೇಮ, ಮೀರಾ, ಮೈಮುನಾ, ರಮ್ಲತ್ ಮೊದಲಾದವರು ಉಪಸ್ಥಿತರಿದ್ದರು.

