


ಮಂಗಳೂರು: ಬಳ್ಳಾರಿಯಿಂದ 10 ಕಿ.ಮೀ ದೂರದಲ್ಲಿ ರೇಡಿಯೇಟರ್ ಸಮಸ್ಯೆಯಿಂದಾಗಿ ಕೆಟ್ಟುನಿಂತಿದೆ. ದುರಸ್ತಿ ನಡೆಸಿ ಬಸ್ ಈಗ ಹೊರಟಿದೆ ಎಂದು ಉಳ್ಳಾಲವಾಣಿಗೆ ಕೆಎಸ್ ಆರ್ ಟಿಸಿ ದ.ಕ ಜಿಲ್ಲಾ ಡಿ.ಸಿ ರಾಜೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಬಸ್ ದುರಸ್ತಿಗೆ ಯಾರೂ ಸ್ಪಂಧಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಂಗಾಲಾಗಿದ್ದರು. ಈ ಕುರಿತು ಉಳ್ಳಾಲವಾಣಿ ವರದಿ ನಡೆಸಿತ್ತು. ತಕ್ಷಣಕ್ಕೆ ಸ್ಪಂಧಿಸಿದ ದ.ಕ ಜಿಲ್ಲಾ ಕೆಎಸ್ ಆರ್ ಟಿಸಿ ಡಿ.ಸಿಯವರು ಡಿಪೋ ಸಂಪರ್ಕಿಸಿ, ನಿರ್ವಾಹಕ, ಚಾಲಕರಲ್ಲಿ ವರದಿ ಕೇಳಿದ್ದಾರೆ. ಅಲ್ಲದೆ ರೇಡಿಯೇಟರ್ ಸಮಸ್ಯೆಯನ್ನು ದುರಸ್ತಿ ನಡೆಸಿ ಮಂಗಳೂರಿನತ್ತ ತೆರಳುವಂತೆ ಸೂಚಿಸಿದ್ದಾರೆ. ತಕ್ಷಣಕ್ಕೆ ಪ್ರಯಾಣಿಕರ ಸಮಸ್ಯೆಗೆ ಪ್ರತಿಕ್ರಿಯಿಸಿದ ಕೆಎಸ್ ಆರ್ ಟಿಸಿ ಡಿ.ಸಿಯವರಿಗೆ ಪ್ರಯಾಣಿಕರು ಅಭಿನಂದಿಸಿದ್ದಾರೆ.

