

ಮುಡಿಪು: ಇಲ್ಲಿನ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿAದ ಜರಗಿತು.
ಹಬ್ಬದ ಪ್ರಯುಕ್ತ ಜರಗಿದ ಮೊದಲ ದಿನದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ವಂ. ಡಾ. ಪೀಟರ್ ಪಾವ್ಲ್ ಸಲ್ಡನ್ಹಾ ನೆರವೇರಿಸಿದರೆ, ಭಾನುವಾರ ಮೂರನೇ ದಿನದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಮಂಗಳೂರು ದಕ್ಷಿಣ ವಲಯದ ಪ್ರಧಾನ ಧರ್ಮಗುರುಗಳು, ಪೆರ್ಮನ್ನೂರು ಚರ್ಚಿನ ಧರ್ಮಗುರು ವಂ ಫಾ. ಸಿಪ್ರಿಯನ್ ಪಿಂಟೊ , ವೈಟ್ ಡವ್ಸ್ ಆತ್ಮೀಕ ನಿರ್ದೇಶಕರಾದ ವಂ. ಫಾ. ಆಲ್ವಿನ್ ಡಿಕುನ್ಹಾ, ಬಜಾಲ್ ಚರ್ಚಿನ ಧರ್ಮಗುರು ವಂ. ಫಾ. ಆಂಡ್ರೂö್ಯ ಡಿ,ಸೋಜ, ಮುಡಿಪು ಪುಣ್ಯಕ್ಷೇತ್ರದ ನಿರ್ದೇಶಕ ವಂ. ಫಾ. ಅಸ್ಸಿಸಿ ರೆಬೆಲ್ಲೊ, ವಸತಿ ಧರ್ಮಗುರುಗಳಾದ ವಂ.ಫಾ. ಸಂತೋಷ್ ಮಿನೆಜಸ್ ಬಲಿಪೂಜೆಗೆ ಸಾಕ್ಷಿಯಾದರು.
ನೆರೆದ ಸಾವಿರಾರು ಭಕ್ತರು ಹಬ್ಬದ ಸಂಭ್ರಮದಲ್ಲಿ ನೆರೆದು ಅನ್ನಸಂತರ್ಪಣೆ ಸಂತರ್ಪಣೆಯಲ್ಲಿ ಭಾಗಿಯಾದರು.
ಗಣ್ಯ ಉಪಸ್ಥಿತಿಯಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು. ಟಿ. ಖಾದರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್ ಗಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್.ಆರ್. ಪೂಜಾರಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಭೇಟಿ ನೀಡಿ ಆಶೀರ್ವಾದ ಪಡೆದು ಹಬ್ಬಕ್ಕೆ ಶುಭಕೋರಿದರು. ಮುಖಂಡರಾಗಿರುವ ಅರುಣ್ ಡಿಸೋಜ ಮುಡಿಪು ಉಪಸ್ಥಿತರಿದ್ದರು.
ಮೂರನೇ ದಿನದ ಸಮಾರಂಭದಲ್ಲಿ ಸಮಾರೋಪ ಪೂಜೆಯನ್ನು ಫ್ರಾಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಅತೀ ವಂದನೀಯ ಮೊನ್ಸಿಂಜೊರ್, ವಂ. ಫಾ. ಮ್ಯಾಕ್ಸಿಮ್ ಎಲ್ ನೊರೊನ್ಹಾ ನೆರವೇರಿಸಿದರು.


ಮಾಜಿ ಸಚಿವರಾದ ಬಿ. ರಮಾನಾಥ ರೈ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ವಂ| ಫಾ. ರೋಕಿ ಡಿಸೋಜ, ವಂ| ಫಾ. ಹ್ಯಾರಿ ಡಿಸೋಜ ಮುಡಿಪು ಹಾಗೂ ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ. ಫಾ.ಅಸ್ಸಿಸಿ ರೆಬೆಲ್ಲೊ, ವಸತಿ ಧರ್ಮಗುರುಗಳಾದ ವಂ.ಫಾ. ಸಂತೋಷ್ ಮಿನೆಜಸ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚುಗಳ ಫಾದರ್ ಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಮಾಜಿ ಶಾಸಕರಾದ ರಮನಾಥ ರೈ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ , ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜಾರಾಮ್ ಭಟ್ ಭೇಟಿ ನೀಡಿದರು.