UN NETWORKS




ಬೆಂಗಳೂರು: ಬೆಂಗಳೂರು ಶಂಸುಲ್ ಉಲಮಾ ದಾರುಸ್ಸಾಲಾಂ ಅಕಾಡೆಮಿ ವಾದಿತ್ವೈಬಾ ಕಿನ್ಯ ಇದರ ಬೆಂಗಳೂರು ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಅಬ್ದುಲ್ ಜಬ್ಬಾರ್ ಉಸ್ತಾದ್(ನ.ಮ) ಹಾಗೂ ಅತ್ತಿಪಟ್ಟ ಉಸ್ತಾದ್(ನ.ಮ) ಅನುಸ್ಮರಣಾ ಕಾರ್ಯಕ್ರಮ ಜನವರಿ 17 ಗುರುವಾರ ರಾತ್ರಿ 10 ಗಂಟೆಗೆ ಮೆಜೆಸ್ಟಿಕ್ ವಕ್ಕಲ್ ಮಸ್ತಾನ್ ಆಡಿಟೋರಿಯಂ ನಲ್ಲಿ ನಡೆಯಲಿದೆ.



ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ಇದರ ಅಧ್ಯಕ್ಷರಾದ ಸೆಯ್ಯಿದ್ ಅಮೀರ್ ತಂಗಳ್ ಕಿನ್ಯ ದುವಾ ಆಶೀರ್ವಚನ ನೀಡಲಿದ್ದಾರೆ.
ಸಂಸ್ಥೆಯ ಪ್ರಿನ್ಸಿಪಾಲರಾದ ಖಾಸಿಂ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಲಮಾ ಉಮರಾ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.