



ತಲಪಾಡಿ: ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಬಂಟ್ವಾಳ ಇಲ್ಲಿಯ ದ್ವಿತೀಯ ಸಿಎಸ್ಇ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ವಿ ಶೆಟ್ಟಿ ಇವರು ಆಳ್ವಾಸ್ ಕಾಲೇಜು ಮೂಡಬಿದ್ರೆ ಇಲ್ಲಿ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಆಂದ್ರಪ್ರದೇಶದ ಗುಂಟೂರು ಇಲ್ಲಿನ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯಲ್ಲಿ ನಡೆದ ಸೌತ್ ವೆಸ್ಟ್ ಝೋನ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುತ್ತಾರೆ. ಇವರು ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಶಾಲೆ ಕೊಲ್ಯ ಸೋಮೇಶ್ವರ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಇವರಿಂದ ಲೇಟ್ ಲಿಫ್ಟಿಂಗ್ ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ತಲಪಾಡಿ ನಾರ್ಲ ಪಡೀಲ್ ವಿಠ್ಠಲ ಶೆಟ್ಟಿ ಮತ್ತು ಸುಶೀಲ ವಿ ಶೆಟ್ಟಿ ಇವರ ಪುತ್ರಿಯಾಗಿದ್ದಾರೆ.
