Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಕೋಟೆಕಾರು ಗ್ರಾಮದಲ್ಲಿ 33/11ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರಕ್ಕೆ ಪರೀಕ್ಷಾರ್ಥ ಚಾಲನೆ

UllalaVaniBy UllalaVaniDecember 25, 2024Updated:December 25, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುಂದಿನ 30 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ನಿರಂತರ ವಿದ್ಯುತ್ ನೀಡುವ ಯೋಜನೆ ರೂಪಿಸುತ್ತಿದ್ದು, ಇತರ ಜಿಲ್ಲೆ, ರಾಜ್ಯದವರು ಯಾವುದೇ ಭಾಗದಲ್ಲೂ ಬಂಡವಾಳ ಹಾಕುವ ಸಂದರ್ಭ ವಿದ್ಯುತ್‌ನ ಸಮಸ್ಯೆ ಈ ಪ್ರದೇಶದಲ್ಲಿ ಉದ್ಭವಿಸದ ರೀತಿಯಲ್ಲಿ ಅನುದಾನವನ್ನು ತರಲಾಗಿದೆ ಎಂದು ವಿಧಾನಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಮೆಸ್ಕಾಂ ವತಿಯಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕೋಟೆಕಾರ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 33/11ಕೆವಿ ಸಾಮರ್ಥ್ಯದ ಉಪಕೇಂದ್ರ ಮಂಗಳವಾರ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದರು.
ಮುಂದಕ್ಕೆ ಉಳ್ಳಾಲ ನಗರ, ಕೋಟೆಕಾರ್, ಕೊಣಾಜೆ, ಬೆಲ್ಮ, ಬೋಳಿಯಾರ್, ಕಿನ್ಯದಲ್ಲಿ ಸೆಕ್ಷನ್ ಕಚೇರಿ ನಿರ್ಮಾಣದ ಜೊತೆಗೆ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಆಗಲಿದೆ. ಇದರಿಂದಾಗಿ ಉಳ್ಳಾಲ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಯೋಜನೆಯಿಂದ ಪ್ರಸ್ತುತ ಕಿನ್ಯಾ, ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110ಕೆವಿ ವಿದ್ಯುತ್ ಕೊಣಾಜೆ ಉಪಕೇಂದ್ರದಿAದ ಮತ್ತು ಕೋಟೆಕಾರ್, ಸೋಮೇಶ್ವರ ಪುದೇಶಗಳಿಗೆ 33 ಕೆವಿ ವಿದ್ಯುತ್ ತೊಕೊಟ್ಟು ಉಪಕೇಂದ್ರದಿAದ ಸರಬರಾಜು ಮಾಡಲಾಗುತ್ತಿದೆ. ಉಪಕೇಂದ್ರಗಳ ಮತ್ತು ವಿದ್ಯುತ್ ಮಾರ್ಗಗಳ ಓವರ್ ಲೋಡ್ ನಿಂದಾಗಿ ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದ್ದು ಕೋಟೆಕಾರ್ ಉಪ ಕೇಂದ್ರ ಕಾರ್ಯಾರಂಭಗೊAಡರೆ ಕಿನ್ಯಾ, ತಲಪಾಡಿ, ಕೋಟೆಕಾರ್ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಮಂಗಳೂರು ಮೆಸ್ಕಾಂ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್., ತಾಂತ್ರಿಕ ನಿರ್ದೇಶಕ ಕೆ.ಎಂ.ಮಹಾದೇವ ಸ್ವಾಮಿ, ಮೆಸ್ಕಾಂ ಆರ್ಥಿಕ ಅಧಿಕಾರಿ ಹರಿಶ್ಚಂದ್ರ ಬೋರ್ಕರ್, ಮುಖ್ಯ ಅಭಿಯಂತರ ರವಿಕಾಂತ್ ಕಾಮತ್, ಆಡಳಿತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಉಮೇಶ್ ಗಟ್ಟಿ, ಅಧೀಕ್ಷಕ ಅಭಿಯಂತರ ಕೃಷ್ಣರಾಜ ಕೆ, ಕಾರ್ಯನಿರ್ವಾಹಕ ಅಭಿಯಂತರ ಲೋಹಿತ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ್, ಸಹಾಯಕ ಅಭಿಯಂತರರಾದ ಮಾರಪ್ಪ, ನಿತೇಶ್ ಹೊಸಗದ್ದೆ, ರಾಜೇಶ್ ಶೆಟ್ಟಿ, ವಿನೋದ್, ಮಿಥುನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯಾ ಎಸ್.ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷೆ ರವಿಶಂಕರ್ ಸೋಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಸಮುದ್ರ ತೀರಕ್ಕೆ ಕಲ್ಲು ಸಾಗಾಟ ಮೂವರ ವಿರುದ್ಧ ಪ್ರಕರಣ ದಾಖಲು, ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ ಕಲ್ಲು ಕಳವು ಪ್ರಕರಣ ದಾಖಲು

July 29, 2025

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರದ ಅನುಮೋದನೆ

July 29, 2025

ನಿಮಿಷಾ ಪ್ರಿಯಾ ಮರಣದಂಡನೆ ರದ್ದತಿ ಸಾಧ್ಯತೆ : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಮಾಹಿತಿ

July 29, 2025

Comments are closed.

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಉಳ್ಳಾಲದ ಸಮುದ್ರ ತೀರಕ್ಕೆ ಕಲ್ಲು ಸಾಗಾಟ ಮೂವರ ವಿರುದ್ಧ ಪ್ರಕರಣ ದಾಖಲು, ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ ಕಲ್ಲು ಕಳವು ಪ್ರಕರಣ ದಾಖಲು

By UllalaVaniJuly 29, 20250

ಉಳ್ಳಾಲ : ನಂದಳಿಕೆ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಉಳ್ಳಾಲದ ಸಮುದ್ರಕ್ಕೆ ಕಲ್ಲು ಸಾಗಿಸುತ್ತಿದ್ದ ಮೂವರ ವಿರುದ್ಧ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರದ ಅನುಮೋದನೆ

July 29, 2025

ನಿಮಿಷಾ ಪ್ರಿಯಾ ಮರಣದಂಡನೆ ರದ್ದತಿ ಸಾಧ್ಯತೆ : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಮಾಹಿತಿ

July 29, 2025

ಪಟ್ಟತಮೊಗೇರು ಹೆಸರಿನ ಬದಲಾವಣೆಗೆ ಸ್ಥಳೀಯರ ವಿರೋಧ – ಚುನಾವಣಾ ಆಯೋಗಕ್ಕೆ ದೂರು

July 29, 2025
1 2 3 … 1,543 Next
Automatic YouTube Gallery

ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ

ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
#ullalavani #Konaje #SanthoshkumarRaiBoliyar
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
Now Playing
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ...
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
#ullalavani #Konaje #SanthoshkumarRaiBoliyar
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
Now Playing
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು #ullalavani #news ...
ತೊಕ್ಕೊಟ್ಟು: ಹಿರಿಯ ಬಿಜೆಪಿ
ಮುಖಂಡೆ ಅಂಗಡಿಯಿಂದ ಕಳವು
#ullalavani #news #ullala #kannadanews #mangalore #breakingnews #thokkottu
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications