ತೊಕ್ಕೊಟ್ಟು : ಶಿಕ್ಷಣ ಕಾಶಿಯಾಗಿರುವ ಉಳ್ಳಾಲ ತಾಲೂಕಿನಲ್ಲಿ ಅತೀ ಕಡಿಮೆ ಶುಲ್ಕವನ್ನು ಪಡೆದು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಅನುಕೂಲಕರವಾದ ರೀತಿಯಲ್ಲಿ ಒದಗಿಸುತ್ತಾ ಬಂದಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಕಾಲೇಜಿನ ಶಾಖೆಗಳನ್ನು ಹೊಂದಿರುವ ಸಂಸ್ಥೆ ತಾವು ಪಡೆಯುವ ಕನಿಷ್ಠ ಶುಲ್ಕದಲ್ಲಿ ಬಸ್ಸಿನ ವ್ಯವಸ್ಥೆ, ಶಾಲಾ ಯುನಿಫಾರಂ, ಪಠ್ಯಪುಸ್ತಕಗಳೆಲ್ಲವನ್ನೂ ನೀಡುತ್ತಾ ಬಂದಿದೆ. ಎಲ್ಲದಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳಲ್ಲಿ ಒದಗಿಸುವಂತಹ ಮಧ್ಯಾಹ್ನದ ಊಟವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಹೌದು ಬೆಂಗಳೂರು ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧೀನಕ್ಕೆ ಒಳಪಟ್ಟಿರುವ ಹರೇಕಳ ದೇರಿಕಟ್ಟೆಯ ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಾಲೆಯ ವಾರ್ಷಿಕ ಶುಲ್ಕ ರೂ.25,000 ಆಗಿದ್ದು, ಪಿಯುಸಿ ಕಾಲೇಜಿನ ಶುಲ್ಕವೂ ರೂ.25000 ಆಗಿದೆ. ಇನ್ನಿತರ ಯಾವುದೇ ಶುಲ್ಕಗಳಿರುವುದಿಲ್ಲ. ಶಾಲಾ ಕಾಲೇಜಿನ ಒಟ್ಟು ಪ್ರವೇಶದಲ್ಲಿ ಆರ್.ಟಿ.ಇಗೆ ಶೇ.25% ಮೀಸಲಾತಿಯಿದೆ. ಇನ್ನುಳಿದ ಶೇ.75 ತಿರಾ ಕಡುಬಡವರ ಮಕ್ಕಳಿಗೆ ಶೇ.25 ಮೀಸಲಾತಿಯಿದೆ. ಷರತ್ತುಗಳನ್ವಯ ಅರ್ಹರು ಶಾಲಾ ಕಾಲೇಜಿಗೆ ಭೇಟಿ ಕೊಟ್ಟು ಅರ್ಜಿ ಪಡೆಯಬಹುದು. ಹೊರ ಶಾಲೆಯಿಂದ ಟಿ.ಸಿ ತರುವ ಮಕ್ಕಳಿಗೆ ಶೇ.90 ಕ್ಕಿಂತ ಅಧಿಕ ಅಂಕಗಳು ಪಡೆದಿದ್ದಲ್ಲಿ ಶೇ.50 ಶುಲ್ಕ ಕಡಿತಗೊಳಿಸಿ ಪ್ರವೇಶಾತಿ ದಾಖಲಿಸುತ್ತಾರೆ. ಅಲ್ಲದೆ ಹೆತ್ತವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಗೌರವ ಧನವನ್ನು ನೀಡಲಾಗುತ್ತದೆ.
ಕುರ್ಆನ್, ಭಗವದ್ಗೀತೆ , ಬೈಬಲ್ ಬೋಧನೆ
ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಅನ್ನುವ ಆಶಯದೊಂದಿಗೆ ಕಲಿಕೆಯ ಜೊತೆಗೆ ಕುರ್ಆನ್, ಭಗವದ್ಗೀತೆ, ಬೈಬಲ್ ಬೋಧನೆಯನ್ನು ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗುತ್ತಿದೆ. ನುರಿತ ಅಧ್ಯಾಪಕರ, ಪ್ರಾಧ್ಯಾಪಕರ ನೇಮಿಸಿ ವಿದ್ಯಾರ್ಥಿಗಳಿಗೆ ನೈತಿಕ ಬೋಧನೆಯೊಂದಿಗೆ ಕಲಿಕೆಯನ್ನು ಪರಿಣಾಮಕಾರಿಯಾಗಿ ಕಲಿಸಲಾತ್ತಿದೆ. ಇದರಿಂದ ಪ್ರತಿ ವರ್ಷದ ಫಲಿತಾಂಶಗಳು ಉತ್ತಮವಾಗಿ ಲಭಿಸುತ್ತಿದೆ.
ಉಚಿತ ಊಟ
ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮಧ್ಯಾಹ್ನ ಉಚಿತ ಊಟವನ್ನು ಒದಗಿಸಲಾಗುತ್ತಿದೆ. ಸಸ್ಯಹಾರ ಹಾಗೂ ಮಾಂಸಹಾರದ ಊಟವನ್ನು ಉಚಿತವಾಗಿ ಆಡಳಿತ ಸಂಸ್ಥೆ ನೀಡುತ್ತಿದ್ದು, ಎಲ್.ಕೆ.ಜಿ ಯು.ಕೆ.ಜಿ ಮಕ್ಕಳಿಗೆ ಲಘು ಆಹಾರವನ್ನು ನೀಡುತ್ತಾ ಬಂದಿದೆ.
ಬಸ್ ವ್ಯವಸ್ಥೆ
ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಹೊರಟು, ನಿಗದಿತ ಸಮಯದಲ್ಲಿ ಮನೆ ತಲುಪುವ ಹಿನ್ನೆಲೆಯಲ್ಲಿ ಬಸ್ ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಡ್ಯಾರ್, ಬಿ.ಸಿ.ರೋಡ್, ಪಂಪ್ವೆಲ್, ಪಜೀರು, ಹರೇಕಳ , ಕಿನ್ಯಾ, ತೊಕ್ಕೊಟ್ಟು, ತಲಪಾಡಿವರೆಗೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ತಂತ್ರಜ್ಞಾನ, ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟ, ದೇಶಮಟ್ಟದಲ್ಲಿ ಭಾಗವಹಿಸುವ ತರಬೇತಿ ಪಡೆದುಕೊಂಡಿದ್ದಾರೆ. ಸಂಸ್ಕೃತಿ, ಕಲೆ ಹಾಗೂ ದೇಶದ ಐಕ್ಯತೆಯನ್ನು ಕಾಪಾಡುವ ಆಡಳಿತ ರೂಪವನ್ನು ಮಕ್ಕಳಿಗೆ ಮೊದಲನೇ ಆದ್ಯತೆಯಾಗಿ ಕಲಿಸಲಾಗುತ್ತಿದೆ. ಸ್ವಾವಲಂಬಿ, ಪ್ರಾಮಾಣಿಕತೆ ಹಾಗೂ ವಿದ್ಯಾಭ್ಯಾಸದ ನಂತರ ಆದಾಯದ ದಾರಿಯನ್ನು ದೇಶ ಹಾಗೂ ವಿದೇಶಗಳಲ್ಲಿ ಕಂಡುಕೊಳ್ಳಬಹುದಾದ ಕುರಿತು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಗಾರಗಳನ್ನು ಸಂಸ್ಥೆ ಒದಗಿಸುತ್ತಿದೆ.
ನೇತ್ರಾವತಿ ತಟದಲ್ಲಿರುವ ಕ್ಯಾಂಪಸ್
ನೇತ್ರಾವತಿ ನದಿಯ ಸಮೀಪದಲ್ಲೇ ನಿಶಾರ ಕ್ಯಾಂಪಸ್ ಬೇರೂರಿದ್ದು, ಪ್ರಕೃತಿಯ ಸುಂದರ ಸೊಬಗಿನ ನಡುವೆ ರಮಣೀಯ ನೋಟಗಳೊಂದಿಗೆ ಕ್ಯಾಂಪಸ್ ಕಾರ್ಯಾಚರಿಸುತ್ತಿದೆ. ಸುಸಜ್ಜಿತ ಕ್ರೀಡಾಂಗಣ ಹಾಗೂ ಉತ್ತಮವಾದ ವಾತಾವರಣದಲ್ಲಿರುವ ಶಾಲಾ ಕಾಲೇಜು ಕ್ಯಾಂಪಸ್ಸಿಗೆ ವಿದ್ಯಾರ್ಥಿಗಳೇ ಬೆಳ್ಳಿ ಚುಕ್ಕಿಗಳು. ಈಗಾಗಲೇ ಪ್ರವೇಶಾತಿ ಆರಂಭಗೊಂಡಿದ್ದು
ಹೆಚ್ಚಿನ ಮಾಹಿತಿಗಾಗಿ
ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು
ದೇರಿಕಟ್ಟೆ, ಹರೇಕಳ
Head Office :9035090341/9008527432
E-Mail: hyd_nishara@yahoo.com
headofficenishara@gmail.com
Website: www.nisharagroupofinstitutions.com