
ಡಿವೈಎಫ್ಐ ಮೊಂಟೆಪದವು ಘಟಕ ವತಿಯಿಂದ ಮಾದಕ ವ್ಯಸನಗಳ ವಿರುದ್ದ ಜನಜಾಗೃತಿ ಅಭಿಯಾನ ಮತ್ತು ಸೌಹಾರ್ದ ಇಫ್ತಾರ ಕೂಟವು ಮೊಂಟೆಪದವು ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ ರೈ ಯವರು ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಈ ದೇಶದಲ್ಲಿ ಎಲ್ಲಾ ಧರ್ಮಗಳ ಜನರು ಅನ್ನೋನ್ಯತೆಯಿಂದ ಬಾಳಿ ಬದುಕಬೇಕು. ಇಂತಹ ಕಾರ್ಯಕ್ರಮಗಳಿಂದ ಸೌಹಾರ್ದತೆ ಸೃಷ್ಠಿಯಾಗುತ್ತದೆ. ಆದರೆ ದುರಾದೃಷ್ಟವಾತ್ ಇಂದಿನ ಭಾರತದಲ್ಲಿ ಸುಮಾರು 300 ವರ್ಷಗಳಿಗಿಂತಲೂ ಹಳೆಯ ಗೋರಿಗಳ ಬಗ್ಗೆ ಮಾತನಾಡಲಾಗುತ್ತಿದೆ, ಇದೊಂದು ದೊಡ್ಡ ದುರಂತ ಎಂದರು. ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಪಕರಾದ ಡಾ.ಶಿವರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಮೊಂಟೆಪದವು ವಹಿಸಿದ್ದರು.



ಕಾರ್ಯಕ್ರಮದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷರಾದ ನ್ಯಾಯವಾದಿ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಯೆನೆಪೋಯ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್, ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ರಫೀಕ್ ಹರೇಕಳ, ಬಿಜೆಎಂ ಅಧ್ಯಕ್ಷರಾದ ಅಬ್ದುಲ್ ಖಾದರ್, ಕಾರ್ಯದರ್ಶಿ ಅಬ್ದುಲ್ ಅಝೀಝ್, ಕರೀಂ ಗುದುರು, ರಝಾಕ್ ಮುಡಿಪು, ಸಿರಾಜ್ ಬಿಎಂ, ರಫೀಕ್ ಮೊಂಟೆಪದವು, ಶಾಫಿ ಮೊಂಟೆಪದವು, ಅಶ್ಫಾಕ್ ಅಲೇಕಳ, ಅಮೀರ್ ಉಳ್ಳಾಲಬೈಲ್, ಸುನೀಲ್ ತೇವುಲ, ದಿವ್ಯರಾಜ್ ಮುಂತಾದವರು ಉಪಸ್ಥಿತರಿದ್ದರು. ರಝಾಕ್ ಮೊಂಟೆಪದವು ಸ್ವಾಗತಿಸಿ ವಂದಿಸಿದರು
