ತೊಕ್ಕೊಟ್ಟು: ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇದರ ಗುರುಕುಲ ಉತ್ಸವ-2025 ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜ.14 ರಂದು ಮಧ್ಯಾಹ್ನ 3.00 ಕ್ಕೆ ನಡೆಯಲಿದ್ದು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಖೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ದೇವತಾ ಜ್ಯೋತಿ ಪ್ರಜ್ವಲಿಸಲಿದ್ದಾರೆ. ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಇವರಿಗೆ ಯಕ್ಷ ಮಂತ್ರ್ಯಕ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಮಂತ್ರ ನಾಟ್ಯಕಲಾ ಗುರುಕುಲ ಇದರ ಕಾರ‍್ಯದರ್ಶಿ ಕಿರಣ್ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸೋಮೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪವಿತ್ರ ಕುಮಾರ್ ಗಟ್ಟಿ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕರ‍್ಯದರ್ಶಿ ತ್ಯಾಗಮ್ ಹರೇಕಳ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಮಿತ್ ರಾಜ್ ಬೇಕಲ್ ಬಬ್ಬುಕಟ್ಟೆ, ಕಲಾ ಪೋಷಕ ನರೇಶ್ ಪಂಡಿತ್ ಹೌಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಗಲಿದ ವಿದ್ಯಾರ್ಥಿನಿಯ ನೆನಪಲ್ಲಿ ಶೃತಿ ಸ್ಮೃತಿ-ಅಚ್ಚಳಿಯದ ನೆನಪಿನ ಅಂಗವಾಗಿ ನಾಟ್ಯ ಮಂತ್ರ ನಡೆಯಲಿದೆ.
ಸುದ್ಧಿಗೋಷ್ಠಿಯಲ್ಲಿ ಅಧ್ಯಕ್ಷ ವಿದ್ವಾನ್ ಶ್ರಾವಣ್ ಉಳ್ಳಾಲ್, ಗೌರವಾಧ್ಯಕ್ಷೆ ಶಕೀಲಾ ಜನಾರ್ಧನ್, ಕಾರ‍್ಯದರ್ಶಿ ಕಿರಣ್ ಉಳ್ಳಾಲ್, ಟ್ರಸ್ಟೀಗಳಾದ ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು.

