ಕೋಟೆಕಾರು: ನಡಾರು ದೇವರ ಅರಮನೆ ರಸ್ತೆಯ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ 8ನೇ ವರ್ಷದ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದ ವಾರ್ಷಿಕ ಸಾಮೂಹಿಕ ಅಗೆಲು ಸೇವೆ ಫೆಬ್ರವರಿ 23, ಭಾನುವಾರ ಭಕ್ತಿಭಾವದಿಂದ ನಡೆಯಲಿದೆ.
ಈ ಪಾವನ ಸಂದರ್ಭದಲ್ಲಿ, ಶ್ರೀ ಸ್ವಾಮಿ ಕೊರಗಜ್ಜನ ಭಕ್ತಾದಿಗಳು ಭಕ್ತಿ ಹಾಗೂ ಸಮರ್ಪಣಾಭಾವದಿಂದ ಭಾಗವಹಿಸಲು ಸಿದ್ಧತೆಗಳು ನಡೆದಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ಣ ಕಾರ್ಯಕ್ರಮಗಳ ಮೂಲಕ ಈ ಅಗೆಲು ಸೇವೆ ಜರುಗಲಿದೆ.
ಬೆಳಿಗ್ಗೆ 6.30 ದಂಪತಿಗಳಿಂದ ದೀಪ ಪ್ರಜ್ವಲನೆ ,7.00ರಿಂದ ಮಧ್ಯಾಹ್ನ 12.೦೦ ರವರೆಗೆ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಗಣಹೋಮ, ನವಕಲಶ, ಮಹಾಪೂಜೆ
ಸಂಜೆ 6.00 ರಿಂದ 7.00 ರವರೆಗೆ ಸ್ಥಳೀಯ ಮಕ್ಕಳಿಂದ ಜನಪದ ನೃತ್ಯ ಪ್ರದರ್ಶನ, ರಾತ್ರಿ 7.30 ಭಕ್ತಾದಿಗಳ ಸಾಮೂಹಿಕ ಅಗೆಲು ಸೇವೆ, ರಾತ್ರಿ 7.00ರಿಂದ 8.30 ಪ್ರಸಾದ್ ಮಡ್ಯಾರು ಪ್ರಾಯೋಜಿತ “ಕಲಾಂಜಲಿ ಮೆಲೋಡೀಸ್, ಮಂಗಳೂರು” ತಂಡದಿಂದ ಭಕ್ತಿ ರಸಮಂಜರಿ, ರಾತ್ರಿ 8.30 ರಿಂದ 9.30 ಶ್ರೀಕಾಂತ್ ಕೊಂಡಾಣ ಅವರ ನೇತೃತ್ವದಲ್ಲಿ ಜನಪದ ನೃತ್ಯ
ರಾತ್ರಿ 9.30 ಶ್ರೀ ಭ್ರಾಮರಿ ಯಕ್ಷ ನಾಟ್ಯಾಲಯ, ನಡಾರು ಇದರ ವಿದ್ಯಾರ್ಥಿಗಳಿಂದ “ಮೈಮೆದ ಬಾಲೆ ಸಿರಿಕಿಟ್ಟೆ” ಎಂಬ ತುಳು ಯಕ್ಷಗಾನ ಪ್ರದರ್ಶನ (ನಿರ್ದೇಶನ: ಅಶ್ವಥ್ ಮಂಜನಾಡಿ) ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಸಮುದಾಯಕ್ಕೆ ಶ್ರದ್ಧಾ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಮಹೋತ್ಸವವಾಗಿ ಪರಿಣಮಿಸುವ ನಿರೀಕ್ಷೆಯಿದ್ದು, ಎಲ್ಲಾ ಭಕ್ತರು ಕುಟುಂಬ ಸಮೇತ ಭಾಗವಹಿಸಿ, ಶ್ರೀ ಸ್ವಾಮಿ ಕೊರಗಜ್ಜನ ಕೃಪೆಗೆ ಪಾತ್ರರಾಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಸೇವಾ ಸಮಿತಿಯು ವಿನಮ್ರವಾಗಿ ಆಹ್ವಾನಿಸಿದೆ.
ಫೆ.23 ರಂದು ಕೋಟೆಕಾರು ನಡಾರು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ 8ನೇ ವರ್ಷದ ಸಾಮೂಹಿಕ ಅಗೆಲು ಸೇವೆ
