
ಕುತ್ತಾರು: ಕುತ್ತಾರುಪದವು ಮುನ್ನೂರು ಯುವಕ ಮಂಡಲದ 56ನೇ ವಾರ್ಷಿಕೋತ್ಸವ ಸಮಾರಂಭದ ಸವಿನೆನಪಿಗಾಗಿ ಅರ್ಹ ಬಡ ವಿದ್ಯಾ ರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಎ.27 ಬೆಳಿಗ್ಗೆ 10ಕ್ಕೆ ಜರಗಲಿದೆ.
ಅಂದೇ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ಕ್ಕೆ ಸ್ಥಳೀಯ ಮಕ್ಕಳಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 9ಕ್ಕೆ ದಿನಕರ ಭಂಡಾರಿ ಕಣಾಂಜಾರು ರಚಿಸಿ, ಪ್ರಶಾಂತ್ ಸಿ.ಕೆ ನಿರ್ದೇಶನದ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರು ಅಭಿನಯಿಸುವ ಮದಿಮೆದ ಇಲ್ಲಡ್ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ. ವಿಶೇಷ ಸೂಚನೆಯಾಗಿ ಪುಸ್ತಕ ವಿತರಣೆಯ ಅರ್ಜಿಗಳನ್ನು ಎ.23 ಹಾಗೂ ಎ.24ರಂದು ಸಂಘದಲ್ಲಿ ನೀಡಲಾಗುವುದು .