ಉಳ್ಳಾಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ನದ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ 40 ವರ್ಷಗಳಿಗೆ ಪಾದಾರ್ಪಣೆ ನಡೆಸುತ್ತಿರುವ ಸುಸಂದರ್ಭದಲ್ಲಿ 40 ಸಮಾಜಸೇವಾ ಕಾರ್ಯಗಳನ್ನು ಜನವರಿ 2025ರಿಂದ ಡಿಸೆಂಬರ್ 2025ರ ವರೆಗೆ ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಒಂದು ವರ್ಷಗಳ ಕಾಲ ಆಚರಿಸಲು ನಿರ್ಧರಿಸಿರುವ ಮಾರುತಿ ಮಾಣಿಕ್ಯೋತ್ಸವ-2025ರ ವಿಜ್ಞಾಪನಾ ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೋಟಾ ಗೀತಾನಂದ ಫೌಂಡೇಶನ್ನಿನ ಆನಂದ್ ಸಿ ಕುಂದರ್, ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ, ಮಾರುತಿ ಜನಸೇವಾ ಸಂಘ ಮೊಗವೀರಪಟ್ನ ಉಳ್ಳಾಲದ ಅಧ್ಯಕ್ಷ ಸಂದೀಪ್ ಪುತ್ರನ್, ಗೌರವಾಧ್ಯಕ್ಷರಾದ ವರದರಾಜ್ ಬಂಗೇರ, ಸಂಚಾಲಕರಾದ ಸುಧೀರ್ ವಿ. ಅಮೀನ್, ಟ್ರಾಲ್ ಬೋಟ್ ಯೂನಿಯನ್ ನ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.