



ಮಂಗಳೂರು : ಕರ್ನಾಟಕ ಪವರ್ ಲಿಫ್ಟಿಂಗ್ ಅಂಗ ಸಂಸ್ಥೆಯಾಗಿರುವ ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಎ.ಉಮೇಶ್ ಗಟ್ಟಿ ಜೆಪ್ಪು ಆಯ್ಕೆಯಾಗಿದ್ದಾರೆ.
ಮಂಗಳೂರು ಹಂಪನಕಟ್ಟೆಯ ಸರಕಾರಿ ನೌಕರರ ಸಭಾಂಗಣದಲ್ಲಿ ಪವರ್‌ಲಿಫ್ಟಿಂಗ್ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಸೋಸಿಯೇಷನ್‌ನ ಕಾರ್ಯಕಾರಿ ಅಧ್ಯಕ್ಷರಾಗಿ ದೇವದಾಸ್ ಕೂಳೂರು, ಉಪಾಧ್ಯಕ್ಷರಾಗಿ ಕಮಲಾಕ್ಷ ಬಿ. ಕಾಪಿಕಾಡು, ಹೇಮಚಂದ್ರ ಬಬ್ಬುಕಟ್ಟೆ, ಕಾರ್ತಿಕ್ ರಾಜ್ ಮೋರ್ಗನ್ಸ್ ಗೇಟ್, ಭಾಸ್ಕರ ಕುದ್ರೋಳಿ, ಗೌರವ ಕಾರ್ಯದರ್ಶಿಯಾಗಿ ಮಧುಚಂದ್ರ ಗುರು ನಗರ, ಜತೆ ಕಾರ್ಯದರ್ಶಿಗಳಾಗಿ ವಿನ್ಸೆಂಟ್ ಪ್ರಕಾಶ್ ಕಾರ್ಲೊ ತಾರೆ ತೋಟ, ಪ್ರದೀಪ್ ಕುಮಾರ್ ಅಚಾರ್ಯ, ಖಜಾಂಚಿಯಾಗಿ ಮೋಹನ್‌ರಾಜ್ ಕಾರ್ ಸ್ಟ್ರೀಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ್.ಜಿ ಪೂಜಾರಿ ಬಿಕರ್ನಕಟ್ಟೆ, ಕೇಶವ ಕರ್ಕೇರಾ ಕಿನ್ನಿಗೋಳಿ, ಅರುಣ್ ಗಟ್ಟಿ, ಕೋಟೆಕಾರು, ಕಮಲಾಕ್ಷ ಬೋಂದೆಲ್, ಹರ್ಷಿತ. ವಿ.ಸಾಲ್ಯಾನ್ ಸುರತ್ಕಲ್, ದೀಪಾ ಕೆ.ಎಸ್, ಕದ್ರಿ, ಗೀತಾ ಬಾಯಿ ತೊಕ್ಕೊಟ್ಟು ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಎ.ಉಮೇಶ್ ಗಟ್ಟಿ, ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮಧುಚಂದ್ರ ವರದಿ ವಾಚಿಸಿದರು. ಕಾರ್ತಿಕರಾಜ್ ವಂದಿಸಿದರು.