
ಉಳ್ಳಾಲ : ತುಳುನಾಡಿನಲ್ಲಿ ದೈವಾರಾಧನೆಗೆ ಪ್ರಾಮುಖ್ಯತೆ ಹೆಚ್ಚಿದ್ದು, ಕೌಟುಂಬಿಕ ಭದ್ರತೆ, ಸಾಮಾಜಿಕ ನ್ಯಾಯಕ್ಕಾಗಿ ದೈವಾರಾಧನೆಯ ಪರಿಕಲ್ಪನೆ ಜನರ ಮನದಲ್ಲಿ ದಟ್ಟವಾಗಿದೆ. ಇಂತಹ ನಂಬಿಕೆಯನ್ನಿಟ್ಟುಕೊಂಡು ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಶ್ರೀ ಕೊಟ್ಟಾರ ಸ್ಥಾನ, ಮಲರಾಯ ದೈವಸ್ಥಾನದ ಭಂಡಾರಮನೆ ದೈವಚಿತ್ತದಂತೆ ಮುಂದಿನ ಬಂಡಿಯ ಮೊದಲು ನಿರ್ಮಾಣವಾಗಲಿ ಎಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಅಭಿಪ್ರಾಯ ಪಟ್ಟರು.
ಉಳ್ಳಾಲ ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ,ಶ್ರೀ ಮಲರಾಯ ದೈವಸ್ಥಾನದಲ್ಲಿ ದೈವದ ಅಪ್ಪಣೆಯಂತೆ 2025 ರ ಬಂಡಿ ಉತ್ಸವದ ಒಳಗಾಗಿ ಸುಮಾರು 1.25 ಕೋಟಿ ವೆಚ್ಚದಲ್ಲಿ ಮಲರಾಯ ಮತ್ತು ಪರಿವಾರ ದೈವಗಳ ನೂತನ ಭಂಡಾರ ಮನೆ ನಿರ್ಮಾಣವಾಗಲಿದ್ದು ,ಗುರುವಾರದಂದು ಭಂಡಾರ ಮನೆ ಕಾಮಗಾರಿಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಭಾರತೀಯ ಸಂಸ್ಕೃತಿಯು ಧರ್ಮದ ಆಧಾರದಲ್ಲೇ ಇದೆಯೇ ಹೊರತು ಮತದ ಆಧಾರದಲ್ಲಿಲ್ಲ. ಧರ್ಮದ ಸೂಕ್ಷ್ಮತೆಯನ್ನು ಅರಿತು ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಪುರಾತನ ಕಾಲದಿಂದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದೇವೆ .ನಿಷ್ಕಲ್ಮಶ ಸತ್ಯಧಾದಾರದಡಿ ಭಕ್ತಿಯಿಂದ ಪ್ರಾರ್ಥಿಸಿದರೆ ದೈವವು ಎಲ್ಲರಿಗೂ ಒಲಿಯುವುದು. ದೈವಾರಾಧನೆಯಿಂದಲೇ ಇಂದಿಗೂ ಕೂಡು ಕಟ್ಟು ಉಳಿದಿದೆ. ಒಂದು ಕಾಲ ಘಟ್ಟದಲ್ಲಿ ಆಶಯದ ಕೊರತೆ, ಭಿನ್ನಾಭಿಪ್ರಾಯದಿಂದ ಇಲ್ಲಿ ದೈವಾರಾಧನೆ ನಿಂತಿತ್ತು .ಆವಾಗ ಪ್ರಮುಖರಾದ ಉಳ್ಳಾಲ ಸುಂದರ್ ಅವರು ಸಂಬಂಧ ಪಟ್ಟ ಗುರಿಕಾರ ಮನೆಯವರನ್ನು ಒಟ್ಟುಗೂಡಿಸಿ ಈ ಕ್ಷೇತ್ರವನ್ನು ಪುನರುತ್ಥಾನ ಮಾಡಿದ್ದರು. ದೈವೇಚ್ಛೆಯಂತೆ ಇಂದಿಗೂ ಇಲ್ಲಿ ಶ್ರದ್ಧೆಯಿಂದ ದೈವಾರಾಧನೆ ಮುಂದುವರೆದಿದೆ. ದೈವಗಳ ಅಪ್ಪಣೆಯ ನುಡಿಯ ಪ್ರಕಾರ ಆದಷ್ಟು ಶೀಘ್ರವಾಗಿ ಮುಂದಿನ ಬಂಡಿ ಉತ್ಸವದ ಮೊದಲಾಗಿ ಸಂಕಲ್ಪಿತ ಕಾರ್ಯವು ಪೂರ್ಣಗೊಳ್ಳಲಿ ಎಂದು ತಂತ್ರಿಗಳು ಆಶಿಸಿದರು.
ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಮಾತನಾಡಿ, ನೀಲೇಶ್ವರ ತಂತ್ರಿಗಳ ಉಪಸ್ಥಿತಿಯಲ್ಲಿ ಎಲ್ಲಾ ದೈವಸ್ಥಾನಗಳ ಧರ್ಮದರ್ಶಿಗಳು, ಪರಿಚಾರಕರು , ಮಧ್ಯಸ್ಥರು, ದೈವ ಚಾಕರಿಯವರ ಒಟ್ಟು ಸೇರುವಿಕೆಯಲ್ಲಿ ಭಂಡಾರ ಮನೆಯ ಶಿಲಾನ್ಯಾಸ ಕಾರ್ಯ ನಡೆದಿದೆ. ಈ ಪ್ರದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೀರ್ಣೋದ್ಧಾರ, ಬ್ರಹ್ಮ ಕಲಶಗಳು ಸಾಂಘವಾಗಿ ನೆರವೇರಿದೆ. ಉಳಿಯ ಧರ್ಮ ಅರಸರ ಕ್ಷೇತ್ರದ ಬ್ರಹ್ಮಕಲಶ ಆದ ಕೂಡಲೇ ಮಲರಾಯ ಕ್ಷೇತ್ರದಲ್ಲೂ ಭಂಡಾರಮನೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಎಲ್ಲರ ಭಾಗ್ಯ. ಈ ಸತ್ಕಾರ್ಯದಲ್ಲಿ ಜಾತಿ, ಮತಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಮನಸ್ಪೂರ್ತಿಯಿಂದ ಕೆಲಸ ಮಾಡಬೇಕಿದೆ ಎಂದರು.
ಉಳಿಯ ಉಳ್ಳಾಲ್ದಿ ಧರ್ಮರಸರ ಕ್ಷೇತ್ರದ ಮೂಲ್ಯಣ್ಣ ದೇವು ಮೂಲ್ಯಣ್ಣ, ವೈದ್ಯನಾಥ ದೈವಸ್ಥಾನದ ಅರ್ಚಕ ಮುಂಡ ಪೂಜಾರಿ, ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಗುರಿಕಾರ ಗಂಗಾಧರ್ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಕೋರ‍್ದಬ್ಬು ದೈವಸ್ಥಾನ ಬಂಡಿಕೊಟ್ಯದ ಗುರಿಕಾರ ಸಂತೋಷ್ ಉಳ್ಳಾಲ್, ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳಾಲದ ಗುರಿಕಾರರು, ಲಕ್ಷಿ್ಮೀನರಸಿಂಹ ದೇವಸ್ಥಾನದ ಗುರಿಕಾರರು, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಗುರಿಕಾರರು, ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ಭಂಡಾರಮನೆ ನಿರ್ಮಾಣ ಸಮಿತಿ ಅಧ್ಯಕ್ಷರು ಉಳ್ಳಾಲ ಸುಂದರ್ , ದೈವಸ್ಥಾನದ ಅರ್ಚಕ ಲತೀಶ (ಮುಂಡ ಪೂಜಾರಿ), ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಕಾರ್ಯಾಧ್ಯಕ್ಷ ನಿತಿನ್ ರಾಜ್ , ಗೌರವಾಧ್ಯಕ್ಷರು ದೇವಕಿ.ಆರ್. ಉಳ್ಳಾಲ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ಗಣೇಶ್ ಶೆಟ್ಟಿ ಕೆರೆಬೈಲು, ಜಯಲತಾ ದಿಲೀಪ್ ಉಳ್ಳಾಲ ದೊಡ್ಡಮನೆ, ರಮನಾಥ ಭಂಡಾರಿ ಉಳ್ಳಾಲಗುತ್ತು, ದಿನೇಶ್ ರೈ ಉಳ್ಳಾಲಗುತ್ತು , ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ನಾರಾಯಣ ಗುರು ಅಧ್ಯಯನ ಪೀಠದ ಮಾಜಿ ಸದಸ್ಯ ಸತೀಶ್ ಕರ್ಕೇರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಜಿ ಸದಸ್ಯ ರಮೇಶ್ ಶೆಟ್ಟಿ ಬೋಳಿಯಾರ್, ಸಂಚಾಲಕರುಗಳಾದ ಶ್ರೀನಿವಾಸ ಕೊಡಸಾನ, ಭವಾನಿಶಂಕರ್, ಯು.ಕೆ.ಗೋಪಾಲ್, ಹರ್ಷವರ್ಧನ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು, ರಾಜೇಶ್ ಕೆರೆಬೈಲ್, ಉದಯಕುಮಾರ್ ಆರ್ .ಕೆ. ಉಳ್ಳಾಲ್, ಪ್ರಶಾಂತ್ ಸುವರ್ಣ, ಬಾಲಕೃಷ್ಣ ಉಳ್ಳಾಲ್ ಬೈಲ್, ಸತೀಶ್ ಕೆರೆಬೈಲ್, ಜಗದೀಶ್ ಕೆರೆಬೈಲ್, ಲಕ್ಷö್ಮಣ್ ಬಂಡಸಾಲೆ, ಹರಿಣಾಕ್ಷಿ, ರಂಜಿತ್ ಬಂಡಿಕೊಟ್ಯ, ಗಣೇಶ್ ಬಂಡಿಕೊಟ್ಯ, ಜಗದೀಶ್ ಬಂಡಿಕೊಟ್ಯ, ಮುಂತಾದವರು ಉಪಸ್ಥಿತರಿದ್ದರು. ಜಗದೀಶ್ ಗೋಳಿಯಡಿ ನಿರೂಪಿಸಿದರು.

ದೈವತ್ವದ ಪ್ರೇರಣೆಯಿಂದಲೇ ಭಂಡಾರಮನೆ ನಿರ್ಮಾಣ : ಉಳ್ಳಾಲ ಸುಂದರ್
ಮಲರಾಯ ಮತ್ತು ಪರಿವಾರ ದೈವಗಳ ಭಂಡಾರದ ಮನೆಯಲ್ಲಿ ಊರವರಿಗೆಲ್ಲರಿಗೂ ಹಕ್ಕಿದೆ. ಹಾಗಾಗಿ ಎಲ್ಲರನ್ನೂ ಕರೆಸಿ ಅವರ ಸಮ್ಮುಖದಲ್ಲೇ ನೂತನ ಕಾಮಗಾರಿಗೆ ಶಿಲಾನ್ಯಾಸಗೈಯಲಾಗಿದೆ. ದೈವಗಳ ಪ್ರೇರಣೆಯಿಂದಲೇ ಈ ಪುಣ್ಯ ಕಾರ್ಯ ನಡೆಯುತ್ತಿದೆ.
ಉಳ್ಳಾಲ್ ಸುಂದರ್
ಅಧ್ಯಕ್ಷರು
ಭಂಡಾರ ಮನೆ ನಿರ್ಮಾಣ ಸಮಿತಿ
