
ಕುತ್ತಾರು : ಇತ್ತೀಚೆಗೆ ಕದ್ರಿಯಲ್ಲಿ ನಡೆದ ಪುತ್ತಿಲ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ಮತ್ತು ಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಕುತ್ತಾರ್ ಟೀಮ್ ವೈ.ಕೆ. ಮಲ್ಟಿ ಜಿಮ್ ನ ಮೂವರು ಸದಸ್ಯರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
60 ಕೆಜಿ ವಿಭಾಗದಲ್ಲಿ ಸಾಜನ್ ಪ್ರಕಾಶ್ ನಗರ ಇವರು ದ್ವಿತೀಯ ಸ್ಥಾನ ಹಾಗೂ ಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ 65 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ನಿಕೀತ್ ಶೆಟ್ಟಿ ಇವರು 4 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರೆಲ್ಲರೂ ವೈ.ಕೆ.ಮಲ್ಟಿ ಜಿಮ್ ನ ಸದಸ್ಯರಾಗಿದ್ದು, ನವೀನ್ ಕುಲಾಲ್ ಅವರಿಂದ ತರಬೇತಿ ಪಡೆದುಕೊಂಡವರಾಗಿದ್ದಾರೆ.