
ಮಂಗಳೂರು: ಮಂತ್ರಾಲಯ- ಮಂಗಳೂರು ಬರುವ ಕೆ.ಎ19 ಎಫ್ 3551 ಕೆಎಸ್ ಆರ್ ಟಿಸಿ ಬಸ್ ಬಳ್ಳಾರಿಯಿಂದ 10 ಕಿ.ಮೀ ದೂರದಲ್ಲಿ ಕೆಟ್ಟು ನಿಂತು ಗಂಟೆ ಕಳೆದರೂ, ಇಲಾಖೆಯಿಂದ ಯಾವುದೇ ಸ್ಪಂಧನೆ ಈವರೆಗೆ ಸಿಕ್ಕಿಲ್ಲ ಅನ್ನುವ ಆರೋಪ ಪ್ರಯಾಣಿಕರು ಮಾಡಿದ್ದಾರೆ.

ಮಹಿಳೆಯರು, ಮಕ್ಕಳು, ವೃದ್ಧರೆಲ್ಲರೂ ಬಸ್ಸೊಳಗಡೆ ಪ್ರಯಾಣಿಕರಿದ್ದು, ಕಗ್ಗತ್ತಲಲ್ಲಿ ನಿರ್ಜನ ಪ್ರದೇಶದಲ್ಲಿ ಬಸ್ ನಿಂತಿರುವುದರಿಂದ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಿರ್ವಾಹಕ-ಚಾಲಕರು ಸಂಬಂಧಪಟ್ಟ ಡಿಪೋ ಅವರಿಗೆ ಮಾಹಿತಿ ನೀಡಿದರೂ ಗಂಟೆ ಕಳೆದರೂ ಸ್ಪಂಧನೆ ಸಿಗುತ್ತಿಲ್ಲ. ಕೆಎಸ್‌ಆರ್‌ಟಿಸಿ ಅಲ್ಲಿನ ಕಚೇರಿಗಳಿಗೆ ಫೋನಾಯಿಸಿದರೂ ಸ್ಪಂಧನೆ ಸಿಗುತ್ತಿಲ್ಲ. ಈ ಕೂಡಲೇ ರಾಜ್ಯ ಸಾರಿಗೆ ಸಚಿವರು ತುರ್ತಾಗಿ ಗಮನ ಹರಿಸಬೇಕಿದೆ. ಅಧಿಕಾರಿಗಳಿಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿದರ್ಶನ ನೀಡಬೇಕೆಂಬ ಆಗ್ರಹವನ್ನು ಮಾಡಿದ್ದಾರೆ.
