ಕೊಣಾಜೆ: ಶ್ರೀ ಕೃಷ್ಣನ ತತ್ವಾದರ್ಷಗಳು ಸಮಾಜಕ್ಕೆ ದಾರಿದೀಪವಾಗಿದೆ. ಇಂತಹ ಹಬ್ಬಗಳನ್ನು ಎಲ್ಲರೂ ಜೊತೆಗೂಡಿ ಆಚರಿಸಿದರೆ ಸಾಮರಸ್ಯ ಸಮಾಜ ನಿರ್ಮಾಣ ಸಾಧ್ಯ. ಕೊಣಾಜೆ ಪರಿಸರದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

ಅವರು ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ ,ಮಂಗಳ ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ,
,ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಕೆಳಗಿನಮನೆ ಕೊಣಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಅಂಗವಾಗಿ ನಡೆದ 21ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದದರು.
ಸಮಾರಂಭದ ಉದ್ಘಾಟನೆಯನ್ನು ಶ್ರೀ ಉಲ್ಲಾಳ್ತಿ ಅಮ್ಮನವರ ಕ್ಷೇತ್ರ ಕೊಣಾಜೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ ನೆರೆವೇರಿಸಿದರು.
ಅಧ್ಯಕ್ಷತೆಯನ್ನು ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಡಿ ಕುಂದರ್ , ಮೂಡ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ದೇವಣ್ಣಶೆಟ್ಟಿ ,ರಾಜೀವ್ ನಾಯ್ಕ್ ಮುತ್ತು ಶೆಡ್ತಿ, ಹಸನ್ ಕುಂಞಿ ಹಾಜಿ ಕೋಡಿಜಾಲ್, ಎಸ್ ಜಯಪ್ರಸಾದ್ , ಅಬ್ದುಲ್ ರಜಾಕ್ ಗ್ರೀನ್ ಬಾಗ್, ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಯುಕ್ತ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿ ಗೀತೆ, ಹಾಗೂ ಮಡಿಕೆ ಹೊಡೆಯುವುದು, ಮುದ್ದುಕೃಷ್ಣ ಪುಟಾಣಿ ಕೃಷ್ಣ ರಾಧಾಕೃಷ್ಣ, ಸ್ಪರ್ಧೆ ನಡೆಸಲಾಯಿತು, ಇನ್ನಿತರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಯುವಕ ಸಂಘದ ಉಪಾಧ್ಯಕ್ಷ ದಯಾನಂದಗಟ್ಟಿ ಕೆಳಗಿನಮನೆ,
ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮೊಸರು ಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳಾದ ನವೀನ್ ಗಟ್ಟಿ ಬೊಳ್ಳೆಕುಮೇರ್, ಕಿರಣ್ ಗಟ್ಟಿ, ಭಾರತಿ, ಚಂದ್ರಶೇಖರ್ ಗುಡ್ ಪಾಲ್ , ಹಿತಾಕ್ಷಿ, ಗೀತಾ ದಯಾನಂದ, ಪುಷ್ಪಲೋಕೇಶ್, ಲೀಲಾವತಿ, ರಾಮಚಂದ್ರ, ಪೂವಪ್ಪ, ನಿಶಾಂತ್ ಗಟ್ಟಿ, ಕಾರ್ತಿಕ್ ಗಟ್ಟಿ, ದೇವದಾಸ್ ಬೆಲ್ಚಡ, ನವೀನ್ ಕಳ್ಳಿಮಾರು, ಯುವಕ ಸಂಘದ ಪದಾಧಿಕಾರಿಗಳಾದ ಪದಾಧಿಕಾರಿಗಳಾದ ಗೋಪಾಲ್ ಕೊಣಾಜೆ, ಹಮೀದ್ ಕಂಗಿಹಿತ್ಲು, ಹಬೀಬ್ ಕೋಡಿಜಾಲ್ , ಲತೀಫ್ ಕೋಡಿಜಾಲ್, ಇಬ್ರಾಹಿಂ ಕೆಎಂ ಕೋಡಿಜಾಲ್, ಅಮೀರ್ ಕೋಡಿಜಾಲ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ನಾಟಿಕಲ್ ಪರಿಸರದಲ್ಲಿ ಸ್ವಚ್ಛತೆ ಹಾಗೂ ಮಾದಕ ಪಿಡುಗುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಹಾಶಿಮ್ ನಾಟೆಕಲ್, ನಿವೃತ್ತ ರಾಮಕೃಷ್ಣ ಪ್ರಾಥಮಿಕ ಶಾಲೆ ಅಧ್ಯಾಪಕರಾದ ಎಡ್ವರ್ಡ್ ಐಮನ್, ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಉಮೇಶ್ ಪೂಜಾರಿ, ಕ್ರೀಡಾ ತರಬೇತಿ ಹಾಗೂ ಪ್ರೋತ್ಸಾಹಕರಾದ ಕಾರ್ತಿಕ್ ಕಿನ್ಯಾ, ಹಾಗೂ ಸ್ಥಳೀಯ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿ ಕುಮಾರಿ ನಿಂಗವ್ವ ಮತ್ತು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಾಸ್ಟರ್ ಭುವನ್, ವಿದ್ಯಾರ್ಥಿನಿಯರಾದ ಕುಮಾರಿ ತೈಬಾ, ಹಂಶಿಕ, ಬುಶ್ರಾ, ಪಾಯಿಝ, ಇರ್ಫಾನ, ಪ್ರೌಢಶಾಲಾ ಉತ್ತಮ ವಿದ್ಯಾರ್ಥಿನಿ ನಿಶಾ ಅಂಜುಮ್, ಪ್ರಾಥಮಿಕ ಶಾಲಾ ಉತ್ತಮ ವಿದ್ಯಾರ್ಥಿನಿ ಶಿಕಾ ಡಿ ಗಟ್ಟಿ, ಹಾಗೂ ಇನ್ನಿತರ ಸಾಧನೆಗೈದವರಿಗೆ ಸನ್ಮಾನಿಸಲಾಯಿತು.
ಸ್ವಾತಿ ಭಟ್ ಅವರ ನಿರ್ದೇಶನದಲ್ಲಿ ಹಲವು ನೃತ್ಯ ಡ್ಯಾನ್ಸ್ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು
ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುನ್ ನಾಸೀರ್ ಕೆಕೆ ಸ್ವಾಗತಿಸಿದರು.ಯುವಕ ಸಂಘದ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಯುವಕ ಸಂಘ ನಡೆದು ಬಂದ ದಾರಿ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೈಹಿಕ ಶಿಕ್ಷಕಿ ಸುರೇಖ ಹರೀಶ್ ಪೂಜಾರಿ ನಿರೂಪಿಸಿದರು.ಯುವಕ ಸಂಘದ ಅಧ್ಯಕ್ಷ ಎಕೆ ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು.