
ಉಳ್ಳಾಲ: ಶ್ರೀ ಕೊರಗ ತನಿಯ ಸೇವಾ ಸಮಿತಿ ಕೆರೆಬೈಲ್ ಗುಡ್ಡೆ , ಚೆಂಬುಗುಡ್ಡೆ ಇದರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,
48ನೇ ವರ್ಷದ ವಾರ್ಷಿಕ ಕೋಲ ಹಾಗೂ ಶ್ರೀ ನಾಗ ರಕೇಶ್ವರಿ ಸಾನಿಧ್ಯ ಪ್ರತಿಷ್ಠಾ ಮಹೋತ್ಸವವು ಮಾ.20-22ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ. 20ರ ಗುರುವಾರದಂದು ಶ್ರೀ ನಾಗರಕೇಶ್ವರಿ ಸಾನಿಧ್ಯ ಕೆರೆಬೈಲ್ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ದೇವತಾ ಪ್ರಾರ್ಥನೆ, ನವಕಳಶ ಪ್ರತಿಷ್ಠೆ, ಅಧಿವಾಸ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತಂಬಿಲ ಸೇವೆ, ಸಾರ್ವಜನಿಕ ಅಶ್ಲೇಷಾ ಬಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ. 21ರ ಶುಕ್ರವಾರದಂದು ಗಣಹೋಮ ಹಾಗೂ ಬೆಳಿಗ್ಗೆ 10ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ನಾಗರಕೇಶ್ವರಿ ಧರ್ಮಶಿಕ್ಷಣ ಕೇಂದ್ರ ಮಕ್ಕಳಿಂದ ಕುಣಿತ ಭಜನೆ , ಸ್ಥಳೀಯ ಯುವ ಪ್ರತಿಭೆಗಳಿಂದ ಜಾನಪದ ನೃತ್ಯ ನಡೆಯಲಿದೆ
ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ. ರಾತ್ರಿ 10.30 ಗಂಟೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ
ಡಾ. ದೇವದಾಸ್ ಕಾಪಿಕಾಡ್ ರವರ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸುವ ಏರ್ಲಾ ಗ್ಯಾರಂಟಿ ಅತ್ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 22ರ ಶನಿವಾರದಂದು ರಾತ್ರಿ 8 ಗಂಟೆಗೆ ಶ್ರೀ ಗುಳಿಗ ದೈವದ ಕೋಲ ರಾತ್ರಿ 10 ಗಂಟೆಗೆ ಶ್ರೀ ಕೊರಗ ತನಿಯ ದೈವದ ಕೋಲ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.