



ಜಾಯ್ ಲ್ಯಾಂಡ್ ಶಾಲೆ ಕೊಲ್ಯ – ಸೋಮೇಶ್ವರ ಇಲ್ಲಿನ 6 ವಿದ್ಯಾರ್ಥಿನಿಯರಾದ ಕೀರ್ತನ, ಧಾನ್ವಿ ಯು ಸುವರ್ಣ, ಮಿತಾಲಿ ಯು, ಕುಷಿ, ಸಮೀಕ್ಷ ಎಮ್. ಕೆ, ಮೇಘನ ಇವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆಯಲಿರುವ ಎಸ್. ಜಿ. ಎಫ್. ಐ ರಾಷ್ಟ್ರಮಟ್ಟದ ಫುಟ್‍ಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಈ ಮಕ್ಕಳನ್ನು ವಿಧಾನ ಸಭೆಯ ಸಭಾಪತಿಯವರಾದ ಸನ್ಮಾನ್ಯ ಯು. ಟಿ. ಖಾದರ್ ಅವರು ಉಲ್ಲಾಳದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಸನ್ಮಾನಿಸಿದರು.