

ಎಕ್ಕೂರು: ದೇವರ ಸ್ಮರಣೆಯಿಂದ ಶ್ರದ್ಧೆ ಮತ್ತು ಭಕ್ತಿಯ ಮೂಲಕ ವ್ಯಕ್ತಿಗಳ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿದೆ. ಹಿರಿಯರು ದೇವರ ಸ್ಮರಣೆಯನ್ನು ದಿನಚರಿಯಾದಲ್ಲಿ ಅಂಕಿತಗೊಳಿಸುವ ಮಹತ್ವವನ್ನು ಸಾರಿದ್ದಾರೆ. ಸಮಾಜದಲ್ಲಿ ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವ ವೃದ್ಧಿಯಾಗಲು ದೇವರ ಸ್ಮರಣೆ ಮಾರ್ಗದರ್ಶಕವಾಗಿದೆ. ಆಧ್ಯಾತ್ಮ ಪಥದಲ್ಲಿ ದೇವರ ಸ್ಮರಣೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶ್ರೀ ಅನಂತನಾಗ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಬ್ರ. ಎಂ.ಗೋಪಾಲಕೃಷ್ಣ ತಂತ್ರಿವರ್ಯರು ಅಭಿಪ್ರಾಯಪಟ್ಟರು.
ಅವರು ಎಕ್ಕೂರಿನ ಶ್ರೀ ಅನಂತನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಕಂದ ಪಂಚಮಿಯ ಪ್ರಯುಕ್ತ ಜರಗಿದ ವಿಶೇಷ ಪೂಜೆ ಅಭಿಷೇಕಾದಿ ವೈದಿಕ ಕಾರ್ಯಕ್ರಮಗಳು ಹಾಗೂ ಸಂಜೆ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ವಿಶಾಲಾಕ್ಷಿ ವಿ.ನಾಯಕ್ ಪತಂಜಲಿ, ಯೋಗ ಶಿಕ್ಷಣ ಸಮಿತಿ ಎಕ್ಕೂರು ಇಲ್ಲಿನ ರಾಮದಾಸ್, ಅನಂತ ಕೃಷ್ಣ ರಾವ್ ಎಕ್ಕೂರು ದೀಪ ಬೆಳಗಿಸಿದರು.
ಶ್ರೀ ಅನಂತನಾಗ ಸುಬ್ರಹ್ಮಣ್ಯ ಗೀತ ನರ್ತನ ಎಕ್ಕೂರು ಇಲ್ಲಿನ ವಿದುಷಿ ರಕ್ಷಿತಾ ಲಕ್ಷ್ಮೀನಾರಾಯಣ ಭಟ್ ಅವರ
ವಿದ್ಯಾರ್ಥಿಗಳಿಂದ ನೃತ್ಯ ಲಹರಿ ಪ್ರದರ್ಶನ ನಡೆಯಿತು. ಶ್ರೀ ಅನಂತನಾಗ ಸುಬ್ರಹ್ಮಣ್ಯ ದೀನ ಬಂಧು ಭಜನಾ ತರಬೇತುದಾರ ನಾಗೇಶ್ ಕೋಡಿಕಲ್ ಇವರಿಂದ ಕುಣಿತ ಭಜನೆ ನಡೆಯಿತು. ಬಳಿಕ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಹಾಗೂ ಡಿ.8 ಕ್ಕೆ ರಾಘವೇಂದ್ರ ಮತ್ತು ರಾಘವೇಂದ್ರ ವಿದ್ಯಾ ಆರ್ ಭಟ್ ಇವರಿಂದ ಷಡ್ದಲ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

