
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹನುಮಾನ್ ನಗರ ಕುಂಪಲ ಇದರ ವಾರ್ಷಿಕ ಮಹಾಸಭೆ ತಾರೀಕು 16/3/2025 ರಂದು ವ್ಯಾಯಾಮ ಶಾಲೆಯಲ್ಲಿ ನಡೆಯಿತು ಸಭೆಯಲ್ಲಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷರಾದ ಉಮೇಶ್ ಕುಜುಮಗದ್ದೆ ಸಭೆಯನ್ನು ನಡೆಸಿಕೊಟ್ಟರು ಮೊದಲಿಗೆ ಅಧ್ಯಕ್ಷರಾದ ರಘುವೀರ್ ರವರು ಎಲ್ಲರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿಯದ ಮನೋಜ್ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು ನಂತರ 2025-2026 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ನೂತನ ಅಧ್ಯಕ್ಷರಾಗಿ ಉಮೇಶ್ ಗಟ್ಟಿ ಹನುಮಾನ ನಗರ ಉಪಾಧ್ಯಕ್ಷರು ರಂಜಿತ್ ಕುಲಾಲ್ ಕುಜುಮಗದ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಂಪಲ, ಜೊತೆ ಕಾರ್ಯದರ್ಶಿಯಾಗಿ ಅಶ್ವಿತ್ ಕುಜುಮಗದ್ದೆ, ಕೋಶಾಧಿಕಾರಿಗಳಾಗಿ ಸುಪ್ರೀತ್ ಕುಜುಮಗದ್ದೆ ಸಹಾಯಕರಾಗಿ ಸುರೇಶ್ ಶೆಟ್ಟಿ ಚಿತ್ರಾಂಜಲಿನಗರ ಕ್ರೀಡಾ ಕಾರ್ಯದರ್ಶಿಗಳಾಗಿ ಯತಿನ್, ಭವಿತ್ ಹಾಗೂ ಅನಿಲ್, ಪೂಜಾ ಸಂಚಾಲಕರಾಗಿ ರವಿಚಂದ್ರಗಟ್ಟಿ ಶ್ರೀ ರಾಜ್ ಲಕ್ಷ್ಮಣ ಕುಜುಮಗದ್ದೆ, ಶ್ಯಾಮ್ ಪ್ರಸಾದ್ ಭಜನಾ ಸಂಚಾಲಕರಾಗಿ ಸುಭಾಷ್, ಸುರೇಂದ್ರ, ಪ್ರಥಮ್ ಹಾಗೂ ಕಾರ್ಯಕಾರಿ ಸಮಿತಿಗೆ ಹಿರಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ನಿಕಟ ಪೂರ್ವಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರ ಮೂಲಕ ಶುಭಾಶಯದ ಮಾತುಗಳ ನಾಡಿದರು ಕೊನೆಯಲ್ಲಿ ಕಾರ್ಯದರ್ಶಿ ಹರೀಶ್ ರವರು ಧನ್ಯವಾದಗಳನ್ನು ಅರ್ಪಿಸಿದರು.