ಕೋಟೆಕಾರು: ಆಧುನಿಕ ಕಾಲದಲ್ಲಿ ಸುಲಭವಾಗಿ ಸಿಗುವಂತಹ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟಿನ ಪಾತ್ರೆಗಳ ಸಂಸ್ಕೃತಿಗೆ ಕಡಿವಾಣ ಹಾಕಿ ಮಣ್ಣಿನ ಮಡಕೆಯನ್ನು ತಯಾರಿಸಿ ಜನರಿಗೆ ಒದಗಿಸುವಂತಹ ದೊಡ್ಡಮಟ್ಟಿನ ಜನಜಾಗೃತಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ವತಿಯಿಂದ ಸಮಾಜದಲ್ಲಿ ಆಗುತ್ತಿದೆ. ಇಂತಹ ವಸ್ತುಗಳಿಗೆ ಬ್ರಾಂಡಿAಗ್ ಜೊತೆಗೆ ಡಿಜಿಟಲ್ ಮಾರ್ಕೆಟಿಂಗ್ ಅತೀ ಅಗತ್ಯ . ಸಹಕಾರಿ ಸಂಘದ ಎರಡು ಬೇಡಿಕೆಗಳಾಗಿರುವ ಸರಕಾರಿ ಜಾಗ ಒದಗಿಸುವುದು ಹಾಗೂ ಮಣ್ಣಿನ ಪಾತ್ರೆಗಳ ನಿರ್ಮಾಣದ ಘಟಕಕ್ಕೆ ಸೋಲಾರ್ ಪೂರೈಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.


ಅವರು ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ೧೬ನೇ ಮಾಡೂರು ಶಾಖೆಯ ಮಾಡೂರಿನ ಮೆಡಿಪ್ಲಸ್ ಎದುರುಗಡೆಯ ಕಟ್ಟಡದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುಲಾಲ ಸಮಾಜ ಇತಿಹಾಸದಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರತಿಯೊಂದು ಮನೆಯಲ್ಲಿ ಮಡಿಕೆ ಇದ್ದಂತಹ ಕಾಲವಿತ್ತು. ತದನಂತರ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟುಗಳೇ ಜಾಸ್ತಿಯಾಯಿತು. ಈ ನಡುವೆ ಸಂಸ್ಕೃತಿಗೆ ಕಡಿವಾಣ ಹಾಕಿ ಮತ್ತೆ ಮಡಕೆ ಪಾತ್ರೆಗಳ ಸಂಸ್ಖೃತಿಗೆ ದೊಡ್ಡಮಟ್ಟಿನ ಜನಜಾಗೃತಿ ಮೂಡಿಸುವಲ್ಲಿ ಸಹಕಾರಿ ಸಂಘ ಪ್ರಮುಖ ಪಾತ್ರ ವಹಿಸಿದೆ. ಮಣ್ಣಿನ ಪಾತ್ರೆಗಳನ್ನು ಪ್ರಬಲವಾಗಿ ಮಾರಾಟವಾಗಲು ಜನರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅತೀ ಅಗತ್ಯವಾಗಬೇಕು. ಈಗಾಗಲೇ ಮುಡಿಪು, ಮಾಡೂರಿನಲ್ಲಿ ಶಾಖೆಗಳನ್ನು ಆರಂಭಿಸಲಾಗಿದ್ದು, ಮುಂದಿನ ೧೭ ನೇ ಶಾಖೆಯನ್ನು ಉಳ್ಳಾಲ ಕ್ಷೇತ್ರದಲ್ಲೇ ಆರಂಭಿಸಿ.ಆರೋಗ್ಯ ಸಂಬAಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿದೆ. ಮಣ್ಣಿನಿಂದ ಮನುಷ್ಯ ದೂರವಾಗುತ್ತಿದ್ದಂತೆ ರೋಗಗಳು ಜಾಸ್ತಿಯಾಗುತ್ತಿದೆ. ಮಣ್ಣಿನ ಪಾತ್ರಗಳ ಜಾಸ್ತಿ ಉಪಯೋಗಿಸುವಿಕೆ ಅತೀ ಅಗತ್ಯ .
ಮುಡಿಪುವಿನ ಕಾಯರ್ ಗೋಳಿಯಲ್ಲಿ ಅಮ್ಮೆಂಬಳ ಬಾಳಪ್ಪ ಸ್ಮರಣಾರ್ಥ ವೃತ್ತದ ಯೋಜನೆಗೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆ ಇಡೀ ಕರಾವಳಿಯ ಕುಲಾಲರ ಸ್ವಾಭಿಮಾನದ ಕಿರೀಟವಾಗಲಿದೆ . ೬೬ ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಕ್ಕೆ ಯಾವತ್ತೋ ಸರಕಾರಿ ಜಮೀನು ಸಿಗಬೇಕಿತ್ತು. ಆದರೆ ಈ ಬಾರಿ
ಸರಕಾರಿ ಸ್ಥಳ ಕೊಡಿಸಲು ಎಲ್ಲಾ ರಈತಿಯಲ್ಲೂ ಸಹಕರಿಸುತ್ತೇನೆ. ಸೋಲಾರ್ ಅನುಷ್ಠಾನಕ್ಕೆ ವಿಧಾನಪರಿಷತ್ ಸದಸ್ಯರ ಅನುದಾನವನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು ಕುಲಾಲ ಸಮಾಜದ ಶಿಕ್ಷಣ ಸಂಸ್ಥೆಯೂ ಶೀಘ್ರವೇ ಅನುಷ್ಠಾನಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಕೀಲ ಭಾಸ್ಕರ್ ಎಂ. ಪೆರುವಾಯಿ ವಹಿಸಿದ್ದರು.
ಮುಡಿಪು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು.ಮೂಲ್ಯ ಶಾಖೆಯನ್ನು ಉದ್ಘಾಟಿಸಿದರು. ಮರೋಳಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಪ್ರೇಮಾನಂದ ಕುಲಾಲ್ ದೀಪ ಬೆಳಗಿಸಿದರು. ಗಣಕಯಂತ್ರವನ್ನು ಹಿರಿಯ ವಕೀಲ ಲಕ್ಷö್ಮಣ್ ಕುಂದರ್ ಉದ್ಘಾಟಿಸಿದರು. ಸಹಕಾರಿ ಸಂಘದ ಭದ್ರತಾ ಕೊಠಡಿಯನ್ನು ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ದಿನದರ್ಶಿಕೆಯನ್ನು ಶಿಕ್ಷಕಿ ರಂಜಿನಿ ಮಾಡೂರು ಉದ್ಘಾಟಿಸಿದರು. ಪ್ರಥಮ ಠೇವಣಿ ಪತ್ರ ಬಿಡುಗಡೆಯನ್ನು ಕುಲಾಲ ಸಂಘ ಕೊಲ್ಯ ಅಧ್ಯಕ್ಷ ಭಾಸ್ಕರ್ ಕುತ್ತಾರ್ ಉದ್ಘಾಟಿಸಿದರು. ಮಾಡೂರು ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಪುಂಡರೀಕಾಕ್ಷ ಯು. ಪಡೆದುಕೊಂಡರು.
ಕುಲಾಲ ಸಮಾಜ ಸೇವಾ ಸಂಘ ಕೊಲ್ಯ ಇದರ ಅಧ್ಯಕ್ಷ ಭಾಸ್ಕರ್ ಕುತ್ತಾರ್ , ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ ಬಂಗೇರ, ಬಿಎಸ್ ಎನ್ ಎಲ್ ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮೆನೇಜರ್ ಐತಪ್ಪ ಮೂಲ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಹಾಕುವಕಲ್ಲು ಇಲ್ಲಿನ ಶಿಕ್ಷಕಿ ರಂಜಿನಿ ಮಾಡೂರು, ಕಟ್ಟಡದ ಮಾಲೀಕರಾದ ಅಶೋಕ್ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜನಾರ್ದನ ಮೂಲ್ಯ ಸ್ವಾಗತಿಸಿದರು. ಪ್ರವೀಣ್ ಬಸ್ತಿ ನಿರೂಪಿಸಿದರು. ಭವ್ಯಾ ಮತ್ತು ಯಶಸ್ವಿನಿ ಪ್ರಾರ್ಥನೆ ನೆರವೇರಿಸಿದರು.
`ಕುಂಬಾರರ ಕೈಗಾರಿಕೆ ವೃತ್ತಿಯನ್ನು ಸಮಾಜಕ್ಕೆ ಪರಿಚಯ ಮಾಡುವ ಉದ್ದೇಶದಿಂದ ಹಿರಿಯರು ಆರಂಭಿಸಿದ ಸಂಸ್ಥೆ ೬೬ ವರ್ಷಗಳ ಸಂಭ್ರಮದಲ್ಲಿದೆ. ಆರ್ಥಿಕ ಸಂಸ್ಥೆ ನಡೆಸುವುದು ಸುಲಭದ ವಿಚಾರವಲ್ಲ, ಪ್ರಾಮಾಣಿಕತೆ, ದಕ್ಷ ಆಡಳಿತ, ವ್ಯವಹಾರ ಜ್ಞಾನ ಬೇಕಿದೆ. ಎಲ್ಲದನ್ನೂ ಒಗ್ಗೂಡಿಸಿ ಸಂಸ್ಥೆಯನ್ನು ಅಧ್ಯಕ್ಷರಾಗಿರುವ ಭಾಸ್ಕರ್ ಪೆರುವಾಯಿ ಬೆಳಗಿಸುತ್ತಾ ಬಂದಿದ್ದಾರೆ. ಸಂಸ್ಥೆಯನ್ನು ದೊಡ್ಡ ಮಟ್ಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ಪೆರುವಾಯಿ ತಂಡ ನಿರಂತರವಾಗಿ ಮಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿ, ಬ್ಯಾಂಕಿAಗ್ ವ್ಯವಸ್ಥೆ ಕಷ್ಟವಾಗುವವರಿಗೆ ಸಹಕಾರ, ಸಮಾಜಮುಖಿ ಕಾರ್ಯಗಳಿಗೆ
ಸಮಾಜ ಸದೃಢವಾಗಲು ಆರ್ಥಿಕ ಸಂಸ್ಥೆ ಬಲಾಢ್ಯವಾಗಿರಬೇಕು. ಇನ್ನಷ್ಟು ಶಾಖೆಗಳು ಅಲ್ಲಲ್ಲಿ ತಲೆ ಎತ್ತಿ ನಿಲ್ಲಲಿ. ಮಂಗಳೂರು ಭಾಗದಲ್ಲೂ ಶಾಖೆಯ ಆರಂಭದ ಚಿಂತನೆಯನ್ನು ಮುಂದಿನ ಚುನಾವಣೆ ನಂತರ ಮಾಡುತ್ತೇವೆ ಎಂದರು.
ಪ್ರೇಮಾನಂದ ಕುಲಾಲ್
ಅಧ್ಯಕ್ಷರು
ಮರೋಳಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್
`ಗ್ರಾಮೀಣ ಪ್ರದೇಶಗಳಲ್ಲಿ ಕುಶಲಕರ್ಮಿಗಳನ್ನು ಸದಸ್ಯರನ್ನಾಗಿ ಮಾಡಿ, ಸಂಘವನ್ನು ರಚಿಸಿ, ಜಿಲ್ಲೆಯಲ್ಲೇ ಸಂಘವನ್ನು ಸ್ಥಾಪಿಸಿ ಒಳ್ಳೆಯ ಹೆಸರನ್ನು ತಂದ ಸಹಕಾರಿ ಸಂಘವಾಗಿ ಬೆಳೆದು ನಿಂತಿದೆ. ಇದೀಗ ಮಾಡೂರಿನಲ್ಲಿ ೧೬ನೇ ಶಾಖೆಯನ್ನು ಆರಂಭಿಸಿ ಜನರ ವಿಶ್ವಾಸವನ್ನು ಗಳಿಸಿಕೊಂಡು ಸದಸ್ಯರನ್ನಾಗಿ ಮಾಡುತ್ತಿದೆ. ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ತನ್ನ ಸಹಕಾರವೂ ಸದಾ ಸಹಕಾರಿ ಸಂಘದ ಜೊತೆಗಿದೆ ಎಂದರು.
ದಿವ್ಯಾ ಸತೀಶ್ ಶೆಟ್ಟಿ
ಅಧ್ಯಕ್ಷರು
ಕೋಟೆಕಾರು ಪಟ್ಟಣ ಪಂಚಾಯತ್
`ಸಹಕಾರಿ ಸಂಘ ತನ್ನ ೬೬ ವರ್ಷಗಳ ನಿಷ್ಕಳಂಕ ಸೇವೆಯಿಂದಾಗಿ ೧೬ ನೇ ಶಾಖೆ ಆರಂಭಿಸಲು ಸಾಧ್ಯವಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ನಡೆಸಿದ ನಿರಂತರ ಸೇವೆಗಳಿಂದಾಗಿ ನೂತನ ಶಾಖೆಗಳನ್ನು ಆರಂಭಿಸಲು ಸಾಧ್ಯವಾಗಿದೆ. ಸದಸ್ಯರ ಕೊಂಡಿಯಾಗಿ ಸಿಬ್ಬಂದಿ ವರ್ಗ ಇದ್ದು, ಸದಸ್ಯರ ಸೇವೆಯನ್ನು ನಿರಂತರವಾಗಿ ಈಡೇರಿಸಿ ಸಂಘ ಇನ್ನಷ್ಟು ಬೆಳೆಯಲಿ. ‘
ಲಕ್ಷö್ಮಣ್ ಕುಂದರ್
ಹಿರಿಯ ವಕೀಲರು
`ಯೋಚನೆಗಳನ್ನು ಯೋಜನೆಗಳನ್ನಾಗಿಸಿ ರೂಪಿಸುವಲ್ಲಿ ಸಹಕಾರಿ ಸಂಘ ಪುತ್ತೂರು ಕಾರ್ಯನಿರ್ವಹಿಸುತ್ತಿದೆ. ಸಮಾಜದ ಮೂಲ ಕಸುಬನ್ನು ಪರಿಚಯಿಸುವಂತಹ ಕಾರ್ಯ ಮಹತ್ತರವಾದುದು. ಆಧುನಿಕ ಕಾಲದಲ್ಲಿ ಅಲ್ಯುಮಿನಿಯಂ ಪಾತ್ರೆ ಉಪಯೋಗಿಸುವವರಿಂದ ಆರೋಗ್ಯ ಕ್ಕೆ ಹಾನಿಯಿದೆ. ಈ ನಡುವೆ ಮಣ್ಣಿನ ಪಾತ್ರೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಹಿರಿಯರ ಆದರ್ಶಗಳನ್ನು ಪಾಲಿಸುವ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಸೀತಾರಾಮ ಬಂಗೇರ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಸಂಘದ ಪದಾಧಿಕಾರಿಗಳು ಆಹ್ವಾನಪತ್ರಿಕೆಯನ್ನು ಹರಿವಾಣದ ಜೊತೆಗೆ ಎಲೆಅಡಿಕೆಯನ್ನಿಟ್ಟು ಆಹ್ವಾನಿಸಿರುವುದು ಗೌರವದಾಯಕ. ಇದು ಕೊಲ್ಯ ಕುಲಾಲ ಸಮಾಜಕ್ಕೆ ಒಳಪಟ್ಟ ೧೪ ಗ್ರಾಮದ ಸಮಾಜ ಬಾಂಧವರಿಗೆ ಸಂದಾಯವಾದ ಗೌರವ ಎಂದ ಅವರು ಕರ್ನಾಟಕ ರಾಜ್ಯದ ಪಾಲುಭಂಡಾರವನ್ನು ಹೊಂದಿರುವ ಕೆಲವೇ ಸಂಸ್ಥೆಗಳಲ್ಲಿ ಸಹಕಾರಿ ಸಂಘ ಪುತ್ತೂರು ಮತ್ತು ಕುಳಾಯಿ ಇರುವುದು ಸಮುದಾಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಸರಕಾರದ ಪಾಲುಭಂಡಾರವನ್ನು ಪಡೆಯಲು ಪ್ರಾಮಾಣಿಕತನವೇ ಪ್ರಮುಖವಾಗಿರುತ್ತದೆ. ಸೌಹಾರ್ದಕ್ಕೆ ಹೆಸರುವಾಸಿಯಾದ ಪ್ರದೇಶ ಮಾಡೂರು. ಇಲ್ಲಿ ಶಾಖೆಯ ಆರಂಭವಾಗಿರುವುದು ಸಮಾಜಬಾಂಧವರಿಗೆ ಸಂತಸದ ವಿಚಾರ. ಕೋಟೆಕಾರು ಪ.ಪಂಚಾಯತ್ ಆರ್ಥಿಕವಾಗಿ ಮುಂಬರುತ್ತಿರುವ ಪ್ರದೇಶ. ಉಳ್ಳಾಲ ತಾಲೂಕಿನಲ್ಲಿ ಇದು ಎರಡನೇಯ ಶಾಖೆಯಾಗಿದೆ.
ಭಾಸ್ಕರ್ ಕುತ್ತಾರ್
ಅಧ್ಯಕ್ಷರು
ಕುಲಾಲ ಸಮಾಜ ಸೇವಾ ಸಂಘ
ಕೊಲ್ಯ
ಸ್ಥಳೀಯ ಚಿತ್ರಕ್ಕ ಎಂಬವರಿAದಾಗಿ ಶಾಖೆಯ ಆರಂಭವಾಗಿದೆ. ಅವರಿಟ್ಟ ಬೇಡಿಕೆಗೆ ಅನುಗುಣವಾಗಿ ಶಾಖೆ ಆರಂಭಿಸಲು ಶ್ರಮಿಸಿರುವೆನು. ಮಾಡೂರು ಅಭಿವೃದ್ಧಿಗೊಳ್ಳುವ ಉದ್ದೇಶದಿಂದ ಡಿಸೆಂಬರ್ ತಿಂಗಳಲ್ಲಿ ಅಂಚೆ ಕಚೇರಿಯನ್ನೂ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲದಿದ್ದಲ್ಲಿ ಈ ಭಾಗದ ಜನ ಕೊಲ್ಯಕ್ಕೆ ಹೋಗುವಂತಹ ವ್ಯವಸ್ಥೆಯಿದೆ. ಮಣ್ಣಿನ ಸಲಕರಣೆಗಳನ್ನು ಹುಡುಕುತ್ತಾ ಹೋಗುವ ಸಮಸ್ಯೆ ಬಗೆಹರಿದಿದೆ. ಸಮಾಜದ ಕಲೆ, ಸಂಸ್ಕೃತಿಯನ್ನು ಗುರುತಿಸುವ ಕೆಲಸ ಶಾಖೆ ಆರಂಭದಿAದ ಆಗಿದೆ . ಯಾವುದೋ ಮೂಲೆಯಲ್ಲಿ ಆಗುವಂತಹ ಮಣ್ಣಿನ ಸಲಕರಣೆಗಳನ್ನು ಮಾಡೂರಿನ ಜನತೆಗೆ ಮುಟಿಸುವಂತಹ ಕಾರ್ಯ ಸಂತಸದಾಯಕವಾದುದು.
ಸುಜಿತ್ ಮಾಡೂರು
ಸದಸ್ಯರು
ಕೋಟೆಕಾರು ಪಟ್ಟಣ ಪಂಚಾಯತ್
ಸಮಾಜದಲ್ಲಿ ವ್ಯವಸ್ಥೆಗಳು ಹಾಳಾಗುತ್ತಿದ್ದಂತಹ ಸಂದರ್ಭ ಆರಂಭವಾದAತಹ ಸಂಘ ಎಲ್ಲಾ ಜನರನ್ನು ಒಗ್ಗೂಡಿಸಿ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಆರ್ಥಿಕ, ಆರೋಗ್ಯ, ಕಾನೂನು ದೃಷ್ಟಿಯಲ್ಲಿ ಜಾಗರೂಕರಾಗಿರಬೇಕು. ೧೦ ವರ್ಷಗಳ ಕಾಲದಲ್ಲಿ ಬ್ಯಾಂಕುಗಳೆಲ್ಲವೂ ನಶಿಸುತ್ತದೆ, ಬ್ಯಾಂಕುಗಳು ಉಳಿಯುವುದೇ ಇಲ್ಲ. ಸೇವಾ ಸಹಕಾರಿ ಸಂಘಗಳು ಮಾತ್ರ ಮುಂದಿನ ದಿನಗಳಲ್ಲಿ ಬಡ ವರ್ಗದವರ ಸೇವೆಗೆ ಲಭ್ಯವಾಗಲಿದೆ
ಐತಪ್ಪ ಮೂಲ್ಯ
ಬಿಎಸ್ ಎನ್ ಎಲ್ ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮೆನೇಜರ್
ನಾನು ಎಂಬ ಭಾವ ಅಳಿದು ನಾವು ಎಂಬುದು ಬೆಳೆದರೆ ಎಂತಹ ವ್ಯವಸ್ಥೆಯನ್ನು ಬೆಳೆಸಬಹುದು. ಈ ದೃಷ್ಟಿಯಿಂದ ಸಹಕಾರಿ ಸಂಘ ಬೆಳದುನಿಂತಿದೆ. ಬ್ಯಾಂಕುಗಳಲ್ಲಿರುವ ಜಟಿಲ ನಿಯಮಗಳಿಂದಾಗಿ ರೋಸಿ ಹೋಗುತ್ತಿದ್ದೇವೆ, ಅಂತಹ ಸಂದರ್ಭ ಸಹಕಾರಿ ಸಂಘಗಳು ಸಹಕಾರಿ. ಸಹಕಾರಿ ಸಂಘಗಳ ಸಿಬ್ಬಂದಿ-ಸದಸ್ಯರ ಉತ್ತಮ ಬಾಂಧವ್ಯಗಳು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಸಮಸ್ಯೆಗಳು ಎದುರಾದಾಗ ಸಹಕಾರಿ ಸಂಘದ ಸಿಬ್ಬಂದಿ ಸದಸ್ಯರಿಗೆ ಸಹಕರಿಸುವುದೇ ಸಹಕಾರಿ ಸಂಘಗಳ ಉದ್ದೇಶವಾಗಬೇಕು. ಇನ್ನಷ್ಟು ಶಾಖೆಗಳ ಆರಂಭದಿAದಾಗಿ ಅಭಿವೃದ್ಧಿ ಪಥದತ್ತ ಯಶಸ್ವಿಯಾಗಿ ಸಾಗಲಿ
ರಂಜಿನಿ ಮಾಡೂರು
ಶಿಕ್ಷಕಿ
ಅಧ್ಯಕ್ಷರು, ಕಾರ್ಯಕಾರಿ ಮಂಡಳಿ, ಸಿಬ್ಬಂದಿ ವರ್ಗದ ಕಾರ್ಯಗಳು ಆಶ್ಚರ್ಯದಾಯಕ. ಮುಡಿಪು ಶಾಖೆ ಆರಂಭವಾದಾಗಿನಿAದ ಆ ಭಾಗದ ಜನರ ಪ್ರತಿಕ್ರಿಯೆ ಬಹಳಷ್ಟು ಉತ್ತಮವಾಗಿದೆ. ಸಹಕಾರಿ ಸಂಘದ ಅಧ್ಯಕ್ಷರು ಸಿಂಡಿಕೇಟ್ ಬ್ಯಾಂಕಿನAತೆ ಅಭಿನವ ಕೆ.ಕೆ.ಪೈ ಇದ್ದಂತೆ . ಗ್ರಾಹಕನನ್ನು ಕಂಡ ಕೂಡಲೇ ಅಂದಾಜಿನಲ್ಲೇ ಸಾಲವನ್ನು ನೀಡುತ್ತಾರೆ. ಈ ಹಿಂದೆ ಐಒಸಿ ಡೀಲರ್ ಶಿಪ್ ಅಲೋಟ್ ಆಗಿದ್ದರೂ ಸಾಲ ನೀಡುವಲ್ಲಿ ಬ್ಯಾಂಕ್ ಕೈಮೇಲೆ ಮಾಡಿತ್ತು. ಈ ವೇಳೆ ಕೈಹಿಡಿದವರು ಕುಂಬಾರರ ಗುಡಿಕೈಗಾರಿಕೆ ಸಹಕಾರಿ ಸಂಘ, ಯುವಕನ ಬಾಳನ್ನು ಬೆಳಗಿಸಿದ ಉದಾಹರಣೆಯಿದೆ. ಕುಂಬಾರಿಕೆ ವೃತ್ತಿ ಅಳವಡಿಸಿ ಜೀವನ ನಡೆಸುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ಸಹಕಾರಿ ಸಂಘ ನಿಂತಿದೆ. ಒಂದು ಕಾಲದಲ್ಲಿ ಮಣ್ಣಿನ ಪಾತ್ರೆಗಳನ್ನು ತಲೆಯಲ್ಲಿ ಎತ್ತಿಕೊಂಡು ಮನೆಬಾಗಿಲಿಗೆ ಸಂಜೆವರೆಗೂ ತಿರುಗಿ ಮಾರಾಟವಾಗದೇ ಇದ್ದಲ್ಲಿ ಅರ್ಧ ರೇಟಿಗೆ ಮಾರುವಂತಹ ಸ್ಥಿತಿಯಿತ್ತು. ಇಂತಹ ಸಮಸ್ಯೆಗಳನ್ನು ಮನಗಂಡು ಆರಂಭವಾದ ಸಹಕಾರಿ ಸಂಘವಾಗಿದೆ. ಪೆರ್ಡೂರು ಸಹಕಾರಿ ಸಂಘ ಮತ್ತು ಪುತ್ತೂರು ಸಹಕಾರಿ ಸಂಘಗಳು ನಶಿಸುವ ಹಂತದ ಕೈಗಾರಿಕೆಗೆ ಪುನರ್ಜನ್ಮ ಕೊಟ್ಟ ಸಂಸ್ಥೆಗಳಾಗಿದೆ. ವೈಜ್ಞಾನಿಕವಾಗಿ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಿರಿ ಅನ್ನುವ ಪ್ರಚಾರಗಳು ವ್ಯಾಪಕವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯತೆಗಳನ್ನು ಪೂರೈಸುವ ಕೆಲಸಗಳಾಗಬೇಕಿದೆ. ಹಾಸನ, ಮಡಿಕೇರಿ ಭಾಗದಲ್ಲಿ ಕೃಷಿಕರಿಗೆ ಗೊಬ್ಬರ , ಸಲಕರಣೆಗಳನ್ನು ಸಾಲ ನೀಡಿ, ಕೃಷಿ ವಸ್ತುಗಳನ್ನು ಜನರಿಗೆ ಮಾರಾಟ ಮಾಡುವ ಕೃಷಿ ಮೂಲ ವೃತ್ತಿಯಾಗಿರುವ ಕ್ಷೇತ್ರದಲ್ಲಿ ಆರಂಭಿಸುವ ಮನ ಮಾಡಬೇಕಿದೆ . ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕರ್ನಾಟಕದಾದ್ಯಂತ ಶಾಖೆಗಳ ನಿರ್ಮಾಣವಾಗಲಿ.
ಪುಂಡರೀಕಾಕ್ಷ ಯು.
ಅಧ್ಯಕ್ಷರು
ಮುಡಿಪು ಕುಲಾಲ ಸಮಾಜ ಸಂಘ
ಸAಘದ ಎರಡು ಬೇಡಿಕೆಗಳಿದ್ದು ಸರಕಾರದ ಮುಂದಿಡಲು ಬಯಸಿದ್ದೇನೆ. ಆರ್ಥಿಕ ಸ್ವಾವಲಂಬಿಯಾಗಲು ಮೂಡೂರು ಗ್ರಾಮದ ಸರ್ವೆ ೧೪೨/೧ ರಲ್ಲಿ ಸರಕಾರಿ ಜಮೀನಿದ್ದು., ೩ ಎಕರೆ ಜಮೀನನ್ನು ಸಹಕಾರ ಸಂಘಕ್ಕೆ ನೀಡಬೇಕು . ಕೌಡಿಚ್ಚಾರಿನಲ್ಲಿ ಉತ್ಪಾದನಾ ಘಟಕವಿದೆ. ಹಳೇಯ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ, ವಿದ್ಯುತ್ ಪವರ್ ಕಟ್ ನಿಂದಾಗಿ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸೋಲಾರ್ ಅಳವಡಿಸುವ ನಿಟ್ಟಿನಲ್ಲಿ ೧೦ ಲಕ್ಷ ರೂ. ಸರಕಾರದ ಅನುದಾನವನ್ನು ನೀಡಬೇಕು.
ಭಾಸ್ಕರ್ ಎಂ. ಪೆರುವಾಯಿ
ಅಧ್ಯಕ್ಷರು
ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಪುತ್ತೂರು
ಈ ಸಂದರ್ಭ ಜಿಲ್ಲಾ ಸಂಘದ ಕೋಶಾಧಿಕಾರಿ ಕುಶಾಲಪ್ಪ ಕುಲಾಲ್, ಲೋಕನಾಥ್ ಕುಲಾಲ್, ಗಿರಿಧರ್ ಜೆ.ಎಂ, ಹಿರಿಯ ವಕೀಲ ಜಯಪ್ರಕಾಶ್, ಬಿಂದಿಯಾ, ಬಾಬು ಕುಲಾಲ್, ಸೇಸಪ್ಪ ಕುಲಾಲ್, ಸತೀಶ್ ಬಂಟ್ವಾಳ್, ಶ್ರೀನಿವಾಸ್ ಪಡೀಲ್, ರಾಜೀವಿ ಕೆಂಪುಮಣ್ಣು, ವಸಂತ ಬಬ್ಬುಕಟ್ಟೆ, ಸಂಜೀವ ಸೋಮೇಶ್ವರ, ಸದಾನಂದ , ಜಲಜಾಕ್ಷಿ ಬಿ.ಕುಲಾಲ್, ಶಿವಾನಂದ್ ಕನೀರುತೋಟ, ಹರಿನಾಕ್ಷಿ ಟೀಚರ್, ಸತೀಶ್ ಇಂಜಿನಿಯರ್, ಉಮೇಶ್ ಕೊಲ್ಯ, ಸುಂದರ ಬಸ್ತಿ ಸಂಕೊಳಿಗೆ, ಪೂವಪ್ಪ ತಡಂಬಾರು, ವಸಂತ, ಲತೀಶ್ ಮಾಡೂರು, ಜನಾರ್ದನ ಕುಲಾಲ್ ಮುಡಿಪು, ಜಯಪ್ರಕಾಶ್ ಕೈರಂಗಳ, ಸಂಜೀವ ಪರಿಯತ್ತೂರು, ಕೃಷ್ಣಪ್ಪ ಮಾಸ್ಟರ್, ನಿರ್ಮಲಾ ಪುರುಷೋತ್ತಮ್, ಶಶಿಧರ್ ಪೊಯ್ಯತ್ತಬೈಲ್, ವಸಂತ್ ಎನ್ ಕೊಣಾಜೆ, ದಾಮೋದರ್, ದಿನೇಶ್ ನಾಯಕ್ ತೊಕ್ಕೊಟ್ಟು, ಕೃಷ್ಣಪ್ಪ ಅಸೈಗೋಳಿ, ಇವರನ್ನು ಶಾಲು ಹಾಕಿ ಗೌರವಿಸಲಾಯಿತು.