ಕುಂಪಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‍ಲೈನ್ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಕುಂಪಲ ಬೈಪಾಸ್ ಮುಖ್ಯ ರಸ್ತೆಯಿಂದ ಬಾಲಕೃಷ್ಣ ಮಂದಿರದವರೆಗಿನ ಮುಖ್ಯರಸ್ತೆಯನ್ನು ದಿನಾಂಕ: 07/11/2024 ರಿಂದ 10/11/2024 ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು. ಎಂದು ಸೋಮೇಶ್ವರ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದಾಗಿ ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕಾಗಿ ಕೋರಿಕೊಳ್ಳುತ್ತೇವೆ. ಪರ್ಯಾಯ ಮಾರ್ಗವಾಗಿ ದೇರಳಕಟ್ಟೆ, ಯೆನಪೋಯ, ಕೊಲ್ಯ ಶಾರದೋತ್ಸವ ಸಮಿತಿ ಪಕ್ಕದ ರಸ್ತೆ, ಕೊಲ್ಯ ಕನೀರ್‍ತೋಟ ರಸ್ತೆಯನ್ನು ಉಪಯೋಗಿಸುವಂತೆ ಸೋಮೇಶ್ವರ ಪುರಸಭೆ ಸೂಚಿಸಿದೆ.
