
ಉಳ್ಳಾಲ : ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ಬಂಡಿಕೊಟ್ಯ ಉಳ್ಳಾಲ ಇದರ ವಾರ್ಷಿಕ ಬಂಡಿ ಉತ್ಸವವು ಎಪ್ರಿಲ್ 23 ರಿಂದ 25ರ ತನಕ ನಡೆಯಲಿರುವುದು. ಈ ಪ್ರಯುಕ್ತ ದೈವಸ್ಥಾನದಲ್ಲಿ ಬಿಸು ಹಬ್ಬದಂದು ಕೋಳಿ ಕುಂಟ ನಡೆಯಿತು.
ಈ ಸಂದರ್ಭ ದೈವಸ್ಥಾನದ ಅಧ್ಯಕ್ಷರಾದ ಉಳ್ಳಾಲ್ ಸುಂದರ್, ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಸುರೇಂದ್ರಶೆಟ್ಟಿ ಮಂಚಿಲಗುತ್ತು, ಗಣೇಶ್ ಶೆಟ್ಟಿ ಬೊಡಂಗಿಲ, ಶಂಕರ ಹೊಯ್ಗೆಮನೆ, ಜಯಲತಾ ದಿಲೀಪ್ ಉಳ್ಳಾಲ, ಶ್ರೀನಿವಾಸ ಕೊಂಡಾನ, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಕೆ.ಗೋಪಾಲ, ಹರ್ಷವರ್ಧನ ಉಳ್ಳಾಲ, ಮಧ್ವರಾಜ್ ತೊಕ್ಕೊಟ್ಟು, ನಿತಿನ್ ರಾಜ್ ಬಂಡಿಕೊಟ್ಯ, ದೇವಕಿ ಆರ್. ಉಳ್ಳಾಲ, ಉಳ್ಳಾಲಗುತ್ತು ರಮಾನಾಥ ಭಂಡಾರಿ, ಭವಾನಿಶಂಕರ್ ಅತ್ತಾವರ, ಉದಯಕುಮಾರ್ ಆರ್.ಕೆ, ಮೋಹನದಾಸ ಪಾಂಡೇಶ್ವರ, ಲಕ್ಷ್ಮಣ ಬಂಡಸಾಲೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಪ್ರಶಾಂತ್ ಹೆಚ್. ಸುವರ್ಣ ಉಪಸ್ಥಿತರಿದ್ದರು.