
ಏಪ್ರಿಲ್ 2ನೇ ತಾರೀಕಿಗೆ ನಡೆಯಲಿರುವ ಸಾಮಾನ್ಯ ವಿಜ್ಞಾನ ಪರೀಕ್ಷೆಯ ಪುನರಾವರ್ತನೆಯನ್ನು ಇಂದು ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಆದರೂ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವುದರ ಮೂಲಕ ಸಾಮಾನ್ಯ ವಿಜ್ಞಾನ ಪಾಠವನ್ನು ಪುನಾರವರ್ತನೆ ಮಾಡುವುದರೊಂದಿಗೆ ಈದ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತ ಸನ್ಮಾನ್ಯ ಶ್ರೀ ಈಶ್ವರ್ ರವರು ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ SSLC ಯಲ್ಲಿ ಕಲಿಯುತ್ತಿರುವಂತ ಎಲ್ಲಾ ವಿದ್ಯಾರ್ಥಿಗಳು ಮುಸ್ಲಿಂ ಮಕ್ಕಳಿದ್ದರು ಬೆಳಗಿನ ಪ್ರಾರ್ಥನೆಯಾದ ನಂತರ ಶಾಲೆಗೆ ಬಂದು ಸಾಮಾನ್ಯ ವಿಜ್ಞಾನ ಪಾಠದ ಪುನರಾವರ್ತನೆ ಮಾಡುವುದರೊಂದಿಗೆ ಹಬ್ಬವನ್ನು ಆಚರಿಸಿರುವುದು ಶ್ಲಾಘನೀಯ. ಹಬ್ಬದ ಆಸು ಪಾಸಿನಲ್ಲಿ ಸಾಧನೆಯ ಹಬ್ಬದ ಶುಭಾಶಯಗಳು ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವುದೇ ವಾಡಿಕೆ ಆದರೆ ಹಬ್ಬದ ದಿನದಂದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿ ಪುನರಾವರ್ತನೆಯಲ್ಲಿ ಭಾಗವಹಿಸಿರುವುದು ಅಭಿನಂದನಾರ್ಹ ವಾಗಿದೆ ಎಂದರು. ಶಾಲಾ ಸಂಚಾಲಕರಾದ ಇಸ್ಮಾಯಿಲ್ ಹಾಜಬ್ಬ ರವರು ವಿದ್ಯಾರ್ಥಿಗಳಿಗೆ ಹಬ್ಬದೂಟದ ವ್ಯವಸ್ಥೆ ಮಾಡಿದ್ದರು. ಶಾಲಾ ಶಿಕ್ಷಕರಾದ ಶ್ರೀಮತಿ ಸಪ್ನಾ, ಶ್ರೀಮತಿ ಬಬಿತಾ ಸಲಿನ್ ಡಿಸೋಜಾ, ಶ್ರೀಮತಿ ವೀಣಾ, ವಿಜ್ಞಾನ ವಿಷಯ ಶಿಕ್ಷಕಿಯಾದ ಶ್ರೀಮತಿ ರಮ್ಲಾ ಬಾನು, ಶ್ರೀಮತಿ ಸುಮನ, ಶ್ರೀಮತಿ ದೀಶಾ ಪ್ರಿಯ, ಶ್ರೀಮತಿ ಸುಮಾ ಭಾಗವಹಿಸಿದ್ದರು. ಸಮುದಾಯದ ಎಲ್ಲ ವಿದ್ಯಾರ್ಥಿಗಳು ಹಬ್ಬವನ್ನು ಬಿಟ್ಟು ಶಾಲೆಯಲ್ಲಿ ಸಾಮೂಹಿಕ ಈದ್ ಹಬ್ಬವನ್ನು ಆಚರಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿ ರಕ್ಷಕರಿಗೆ ಮುಖ್ಯ ಶಿಕ್ಷಕರಾದ ಶ್ರೀ ಕೆ ಎಂ ಕೆ ಮಂಜನಾಡಿ ಅವರು ಅಭಿನಂದನೆಯನ್ನು ಸಲ್ಲಿಸಿದರು ಉಳ್ಳಾಲ ಕೇಂದ್ರ ಜುಮಾ ಮಸ್ಜಿ ದಿನ ಉಪಾಧ್ಯಕ್ಷರಾದ ಅಶ್ರಫ್ ಅಹಮದ್ ರೈಟ್ ವೇ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಇಮ್ತಿಯಾಜ್ ಹುಸೇನ್ ರವರು ಮಕ್ಕಳಿಗೆ ಶುಭವನ್ನು ಹಾರೈಸಿದರು.