ತೊಕ್ಕೊಟ್ಟು : ಶನಿವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ರೆಹಮತ್ (೪೭) ಎಂಬವರು ಸಾವನ್ನಪ್ಪಿ ಉದ್ರಿಕ್ತರು ಹಾಗೂ ಡಿವೈಎಫ್ ಐ ಪ್ರತಿಭಟಿಸಿದ ಬೆನ್ನಲ್ಲೇ ರಾತ್ರೋರಾತ್ರಿ ಲೋಕೋಪಯೋಗಿ ಇಲಾಖೆ ರಸ್ತೆಯ ಹೊಂಡಗಳನ್ನು ಮುಚ್ಚುವ ದುರ್ಸತಿ ಕಾರ್ಯಕ್ಕೆ ಕೈಹಾಕಿದೆ.


ತೊಕ್ಕೊಟ್ಟು ಚೆಂಬುಗುಡ್ಡೆವರೆಗಿನ ರಸ್ತೆಯ ಹೊಂಡಗಳನ್ನು ಮುಚ್ಚಲಾಗುತ್ತಿದೆ. ಒಂದು ಜೆಸಿಬಿ ಹಾಗೂ ಐವರು ಕಾರ್ಮಿಕರು ಅಪಘಾತ ನಡೆದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದ ಹೊಂಡಗಳನ್ನು ಮರುಡಾಮರೀಕರಣ ನಡೆಸಿ ಮುಚ್ಚುತ್ತಿದ್ದಾರೆ. ರಸ್ತೆ ದುರಸ್ತಿ ನಡೆಸಲು ಮಹಿಳೆಯೊಬ್ಬರ ಜೀವ ಬಲಿಬೇಕಾಯಿತು ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈಗಾಗಲೇ ತೊಕ್ಕೊಟ್ಟು-ಚೆಂಬುಗುಡ್ಡೆ ರಸ್ತೆ ಚತುಷ್ಪಥ ಕಾಮಗಾರಿಯೂ ಆರಂಭಗೊಂಡಿದ್ದು, ಚೆಂಬುಗುಡ್ಡೆ ಭಾಗದಲ್ಲಿ ಗುಡ್ಡವನ್ನು ಅಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಮಗಾರಿ ವೇಳೆ ಪರ್ಯಾಯ ರಸ್ತೆಯಾಗಿ ಇರುವ ಚೆಂಬುಗುಡ್ಡೆ ಸ್ಮಶಾನ ರಸ್ತೆಯ ಅಭಿವೃದ್ಧಿಯೂ ನಡೆಯುತ್ತಿದೆ.