
ಮಂಗಳೂರು: ಉತ್ತಮ ವಿಷಯ ಜ್ಞಾನ ಹೊಂದಿ, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿದುಕೊಂಡು, ಅತ್ಯುತ್ತಮ ಬೋಧನಾ ಕೌಶಲ್ಯ ದೊಂದಿಗೆ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡಿದಾಗ ಶ್ರೇಷ್ಠ ಮಟ್ಟದ ಫಲಿತಾಂಶ ಪಡೆಯಲು ಸಾಧ್ಯ.
ಈ ದೃಷ್ಟಿಯಲ್ಲಿ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿಸೋಜ ಅವರು ಉತ್ತಮ ಶಿಕ್ಷಕರಾಗಿ, ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿ ಗುರುತಿಸಿ ಕೊಂಡಿರುವುದು ಅಭಿನಂದನೀಯ ಎಂದು ಅಭಿಪ್ರಾಯ ಪಟ್ಟರು.
ಅವರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯದ ವತಿಯಿಂದ ಕಿನ್ನಿಕಂಬಳ ರೊಸಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿಸೋಜ ಅವರಿಗೆ ನಡೆದ ವಿದಾಯ ಸನ್ಮಾನ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ವಂದನೀಯ ಭಗಿನಿ ಡಾ. ಮರೆಯೋಲ ಬಿ ಎಸ್ ಇವರು ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐರಿನ್ ಅವರು ಶಾಲೆ ದೇವಸ್ಥಾನಕ್ಕೆ ಸಮ. ಶ್ರದ್ಧೆ, ಭಕ್ತಿ ಕರುಣೆ ತಾಳ್ಮೆ ಮುಂತಾದ ಗುಣಗಳನ್ನು ಮೈಗೂಡಿಕೊಳ್ಳುವುದರಿಂದ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ, ಆಡಳಿತ ಮಂಡಳಿಯವರ, ಮತ್ತು ಸಹೋದ್ಯೋಗಿಗಳ ಪ್ರೀತಿಯನ್ನು ಗಳಿಸಲು ಸಾಧ್ಯ ವಾಯ್ತು. ಎಂದರು
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ನಿಶಿತ್ ಲೂವಿಸ್ ಲೋಬೋ ವಂ. ಫಾ.ಡಾ.ರುಡಾಲ್ಫ್ ಪಿಂಟೊ, ವಂ. ಭ. ಲೀನ ಪಿರೇರಾ, ಸಿ ಆರ್ ಪಿ ಶೀಲಾವತಿ, ಶಾಲಾ ಸಂಚಾಲಕರಾದ ವಂ. ಭ. ರೋಚ್ ಲೀಟಾ, ಶಾಲಾ ಮುಖ್ಯಸ್ಥರು ವಂ. ಭ. ಲಿಲ್ಲಿ ಡಿಸೋಜ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ನಮಿತ, ಸಂಘದ ಪದಾಧಿಕಾರಿಗಳಾದ ಗ್ಲೋರಿಯ ರಾಣಿಪುರ , ರೋನಾಲ್ಡ್ ಪೌಲ್, ಲ್ಯಾನ್ಸಿ ಸಿಕ್ವೆರ, ಮುಂತಾದವರು ಉಪಸ್ಥಿತರಿದ್ದರು.
ವಂ. ಭ. ಲಿಲ್ಲಿ ಡಿಸೋಜ ಸ್ವಾಗತಿಸಿದರು. ವಂ. ಭ. ಲೀನಾ ಮೇರಿ ಸಾಲ್ದಾನ್ಹ ವಂದಿಸಿದರು.