
ಮಂಗಳೂರು: ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಸಾಧಿಸಿದ್ದಾರೆ.
ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್ ಎಸ್ ಸಾಮಾನ್ಯ ವಿಭಾಗದಲ್ಲಿ 3420 (OBC ವರ್ಗದಲ್ಲಿ 639)ನೇ ರ‍್ಯಾಂಕ್ , ತೇಜಸ್ ವಿ ನಾಯಕ್ ಸಾಮಾನ್ಯ ವಿಭಾಗದಲ್ಲಿ 7773(OBC ವರ್ಗದಲ್ಲಿ 1661)ನೇ ರ‍್ಯಾಂಕ್, ಸಾನಿಕ ಕೆ ಎನ್ ಸಾಮಾನ್ಯ ವಿಭಾಗದಲ್ಲಿ 9701, ಮೋಹಿತ್ ಎಂ ಸಾಮಾನ್ಯ ವಿಭಾಗದಲ್ಲಿ 17504 (ST ವರ್ಗದಲ್ಲಿ 143)ನೇ ರ‍್ಯಾಂಕ್, ಎಂ ಮಂಜುನಾಥ್ ಸಾಮಾನ್ಯ ವಿಭಾಗದಲ್ಲಿ 20743ನೇ ರ‍್ಯಾಂಕ್ . ಸಾಚಿ ಶಿವಕುಮಾರ್ ಕಡಿ 24728ನೇ ರ‍್ಯಾಂಕ್ , ಶ್ರೀರಕ್ಷಾ 28163ನೇ ರ‍್ಯಾಂಕ್ , ಯೋಗೇಶ್ ದೀಪಕ್ ನಾಯಕ್ ಸಾಮಾನ್ಯ ವಿಭಾಗದಲ್ಲಿ 31133 (OBC ವರ್ಗದಲ್ಲಿ 8989)ನೇ ರ‍್ಯಾಂಕ್ , ಹರ್ಷಿತ್ ರಾಜು ಹೆಚ್ ಎಂ ಸಾಮಾನ್ಯ ವಿಭಾಗದಲ್ಲಿ 31140ನೇ ರ‍್ಯಾಂಕ್ , ಪ್ರೀತಿ ಸಿ ಎಲ್ ಸಾಮಾನ್ಯ ವಿಭಾಗದಲ್ಲಿ 31939ನೇ ರ‍್ಯಾಂಕ್ (OBC ವರ್ಗದಲ್ಲಿ 9271)ನೇ ರ‍್ಯಾಂಕ್ , ಟಿ ಪ್ರದೀಪ್ ST ವರ್ಗದಲ್ಲಿ 409ನೇ ರ‍್ಯಾಂಕ್ , ಮೋನಿಕಾ ಕೆ ಪಿ ST ವರ್ಗದಲ್ಲಿ 411ನೇ ರ‍್ಯಾಂಕ್ ಮತ್ತು ಪ್ರಜ್ವಲ್ ಡಿ ಎಂ SC ವರ್ಗದಲ್ಲಿ 5429ನೇ ರ‍್ಯಾಂಕ್ ಗಳಿಸಿ ವಿಶೇಷ ಸಾಧನೆಗೈಯ್ಯುವ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.
ಕಾಲೇಜು ಆರಂಭದಿಂದಲೂ ದೇಶದ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾನಿಲಯಗಳಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳು ದಾಖಲೆಯನ್ನು ಪಡೆಯುತ್ತಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಸಂಸ್ಥೆಯು ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿ ಇವರು ಅಭಿನಂದನೆ ಸಲ್ಲಿಸಿದ್ದಾರೆ


