ಮಂಗಳೂರು : ದ.ಕ.ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಜಿ.ಸಂತೋಷ್ ಕುಮಾರ್ ಅವರನ್ನು ಶುಕ್ರವಾರ ಮತ್ತೆ ವರ್ಗಾವಣೆಗೊಳಿಸಲಾಗಿದೆ.

ಎಡಿಸಿ ಆಗಿದ್ದ ಸಂತೋಷ್ ಕುಮಾರ್ರನ್ನು ದ.ಕ.ಜಿಲ್ಲೆಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಜುಲೈ 29ರಂದು ವರ್ಗಾಯಿಸಲಾಗಿತ್ತು. ಇದೀಗ ಆ ಹುದ್ದೆಯನ್ನು ರದ್ದುಗೊಳಿಸಿರುವ ಸರಕಾರ ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.


ದ.ಕ.ಜಿಲ್ಲೆಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ರಾಜು ಕೆ. ಅವರನ್ನು ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿತ್ತು. ಜುಲೈ 31ರಂದು ರಾಜು ಕೆ. ಅವರನ್ನು ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿತ್ತು. ಇದೀಗ ಮತ್ತೆ ಅದನ್ನು ರದ್ದುಪಡಿಸಿ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

