UN Networks

ಉಳ್ಳಾಲ : ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿ ಸಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ, ಚೋಟಾ ರಾಜನ್ ಸಹಚರನನ್ನು ಕೊಣಾಜೆ ಪೊಲೀಸರು ಮುಂಬೈ ನಿಂದ ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ.

ಉಡುಪಿಯ ಶಿರ್ವ ನಿವಾಸಿ ವಿನೇಶ್ ಶೆಟ್ಟಿ (44) ಬಂಧಿತ ಆರೋಪಿ. 2003 ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಜಾಮೀನು ಪಡೆದಿದ್ದ ಆರೋಪಿ 2015 ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದ ವಿನೇಶ್ ವಿರುದ್ದ ವಾರಂಟ್ ಜಾರಿಯಾಗಿತ್ತು.
ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ , ಕೊಲೆ, ಕೊಲೆಯತ್ನ ಸಹಿತ ಹಲವು ಪ್ರಕರಣಗಳಿವೆ. ನಟೋರಿಯಸ್ ಕ್ರಿಮಿನಲ್ ಆಗಿದ್ದ ವಿನೇಶ್ ಮುಂಬೈನಲ್ಲಿ ಛೋಟಾ ಶಕೀಲ್ ಸಹಚರನಾಗಿ ಕಾರ್ಯನಿರ್ವಹಿಸುತ್ತಿದ್ದ.
ಕೊಣಾಜೆ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಮತ್ತು ಎಸ್. ಐ ಸುಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಲ್ಲಿ ಬಂಧಿಸಲಾಗಿದೆ.
ಕ್ರೈಂ ಹಿಸ್ಟರಿ : ಮುಂಬೈನಲ್ಲಿ ನಾಲ್ಕು ಕೊಲೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ, ಮಂಗಳೂರಿನಲ್ಲಿ ಎರಡು ಕೊಲೆ, ದಾವಣಗೆರೆ ಡಕಾಯಿತಿ ಪ್ರಕರಣ, ಪುಣೆಯ ಅಹಮದ್ ನಗರದಲ್ಲಿ 3 ಕೋಟಿ ಹವಾಲಾ ಹಣ ಲೂಟಿ ಗೈದ ಪ್ರಕರಣದಲ್ಲಿ ಈತ ಪ್ರಮುಖನಾಗಿದ್ದ. ಇದು ಇತ್ತೀಚೆಗೆ ನಡೆದ ಪ್ರಕರಣವಾಗಿತ್ತು. ಛೋಟಾ ರಾಜನ್ ಸಹಚರನಾಗಿದ್ದ ಈತ ಬಳಿಕ ಹೇಮಂತ್ ಪೂಜಾರಿ ಜತೆಗೆ ಕುಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.