UN NETWORKS

ನರಿಂಗಾನ: ನರಿಂಗಾನ ಗ್ರಾಮದ ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದ್ ತಕ್ವಾ ಹಾಗೂ ನೂರುಲ್ ಉಲೂಂ ಮದ್ರಸ ಸಮಿತಿ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಕುಂಞ ಹಾಜಿ ಪಾರೆ ಅಯ್ಕೆಯಾಗಿದ್ದಾರೆ.

ನೂತನ ಸಾಲಿನ ಆಡಳಿತ ಮಂಡಳಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿಇಬ್ರಾಹಿಂ ಕುಂಞ ಹಾಜಿ ಪಾರೆ , ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಕುಂಞ ಚೌಕ, ಮಹಮ್ಮದ್ ಎನ್ ಐ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಪಿ.ಐ, ಜೊತೆ ಕಾರ್ಯದರ್ಶಿಗಳಾಗಿ ಖಾಸಿಂ ಲತೀಫಿ, ರಫೀಕ್ ಮುಳ್ಳುಗುಡ್ಡೆ, ಕೋಶಾಧಿಕಾರಿಯಾಗಿ ಅಬ್ದುಲ್ ಮಜೀದ್ ಎಮ್.ಪಿ ಪಾರೆ ಹಾಗೂ 15 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಬ್ದುಲ್ ರಝಾಕ್ ಪಾರೆ ಸಭೆಯ ಅಧ್ಯಕ್ಷತೆ ವಹಿಸಿದರು.
ಕಾರ್ಯದರ್ಶಿ ಖಾಸಿಂ ಲತೀಫಿ ವರದಿ ವಾಚಿಸಿದರು. ಪ್ರ. ಕಾರ್ಯದರ್ಶಿ ಹಮೀದ್ ತಟ್ಲ ಲೆಕ್ಕಪತ್ರ ಮಂಡಿಸಿದರು.