ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೈರಂಗಳ: ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ದ ವತಿಯಿಂದ ಅರ್ಹ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾ.ಜ.ಪಾ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ಅಲ್-ಅಮೀನ್ ಫ್ರೆಂಡ್ಸ್ ಜಾತಿ ಭೇಧ ಮರೆತು ಸಮಾಜ ಬಡವರ ಸೇವೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಸಂಘಟನೆ ದೇಶಕ್ಕೆ ಮಾದರಿಯಾಲಿ ಎಂದು ಹಾರೈಸಿದರು.
ತೋಟಾಲ್ ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬ್ ಮುಹಿಯ್ಯದ್ದೀನ್ ಸಅದಿ ತೋಟಾಲ್ ದುಆ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರವಾದಿಯವರ ಮುಖ್ಯ ಧ್ಯೇಯವೇ ಸಮಾಜ ಸೇವೆ.ಅ ಪ್ರವಾದಿಯ ಹೆಸರಾಗಿ ಅಲ್-ಅಮೀನ್. ಯುವ ಜನತೆ ಸಮಾಜಸೇವೆಯ ಜೋತೆಗೆ ನಾಡಿನಲ್ಲಿ ಎಲ್ಲರೊಂದಿಗೆ ಶಾಂತಿ ವಾತಾವರಣ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ್ ಉಧ್ಘಾಟಿಸಿದರು.ಸಭಾಧ್ಯಕ್ಷತೆಯನ್ನು ಅಲ್-ಅಮೀನ್ ಫ್ರೆಂಡ್ಸ್ ನ ಗೌರವಾಧ್ಯಕ್ಷರಾದ ಅಹ್ಮದ್ ಕುಂಙ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಲ್-ಅಮೀನ್ ನಿರ್ದೇಶಕ ಹಾಗೂ ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಪ್ರಾಸ್ತಾವಿ ಭಾಷಣ ಮಾಡಿದರು.ಮುಖ್ಯ ಅತಿಥಿಗಳಾಗಿ ದ.ಕ&ಉಡುಪಿ ಜಿಲ್ಲಾ ವಕ್ಪ್ ವಕ್ಪ್ ಅಧಿಕಾರಿ ಎಂ.ಅಬೂಬಕರ್ ಹಾಜಿ,ಒ.ಎ.ಒ ತೋಟಾಲ್ ಅಧ್ಯಕ್ಷರು ಟಿ.ಎಸ್ ಇಸ್ಮಾಯಿಲ್ ಹಾಜಿ, ಕೈರಂಗಳ ಗ್ರಾ.ಪಂ ಸದಸ್ಯರಾದ ಲೋಹಿತ್ ಗಟ್ಟಿ, ಜನಾರ್ಧನ್ ಕುಲಾಲ್,ಹಿರಿಯರಾದ ಟಿ.ಕೆ ಇಸ್ಮಾಯಿಲ್, ದೇವದಾಸ್ ಮಾಸ್ಟ್,ಮಾಧ್ಯಮ ಪ್ರತಿನಿಧಿ ಆರಿಫ್ ಕಲ್ಕಟ್ಟ,ಮುನೀರ್, ಅಲ್-ಅಮೀನ್ ಸಂಸ್ಥೆಯ ನಾಸೀರ್ ಡಿ.ಎಸ್,ಶರೀಫ್ ಕೈರಂಗಳ,ನಯೀಮುಲ್ ಹಕ್,ಹಂಝ.ಬಿ ,ಮತ್ತಿತರರು ಉಪಸ್ಥಿತರಿದ್ದರು.
ಕನ್ವೀನರ್ ಜಾಬಿರ್ ಎ.ಎಮ್ ಸ್ವಾಗತಿಸಿ,ಕಾರ್ಯದರ್ಶಿ ನಯೀಮುಲ್ ಹಕ್ ವಂದಿಸಿದರು..