UN NETWORKS


ಕುರ್ನಾಡು: ಅಧ್ಯಕ್ಷರು, ಉಪಾಧ್ಯಕ್ಷರು , ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಎಲ್ಲರ ಒಮ್ಮತದ ಅಭಿಪ್ರಾಯದಂತೆ ಕುರ್ನಾಡುವಿನ ಪ್ರತಿ ಮೂಲೆಗಳಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದೆ. ಇದೊಂದು ಜಿಲ್ಲೆಗೆ ಮಾದರಿಯಾದ ಪಂಚಾಯತ್ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.



ಅವರು ಕುರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಕಟ್ಟೆಮಾರು ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಹಲವು ವರ್ಷಗಳಿಂದ ಕಟ್ಟೆಮಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಥಳೀಯರ ಬೆಂಬಲದಿಂದ ರಸ್ತೆ ಕಾಮಗಾರಿ ಸಾಧ್ಯವಾಗಿದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ ತನ್ನ ವೈಯಕ್ತಿಕ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಗ್ರಾ.ಪಂ ಜನರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಮಾತ್ರ ಗಾಂಧಿಯ ರಾಮರಾಜ್ಯದ ಕನಸು ನನಸಾಗುವುದು. ಇದಕ್ಕೆ ಕುರ್ನಾಡು ಗ್ರಾ.ಪಂ ಸಾಕ್ಷಿಯಾಗಿದೆ ಎಂದರು. ಸ್ಥಳೀಯರಾದ ನಾಗರಾಜ್ ಭಟ್ ಮಾತನಾಡಿ ಹಿಂದೆ ನೀರು ಗಾಳಿ ಆಹಾರ ಜೀವನಾಶ್ಯಕವಾಗಿತ್ತು. ಸದ್ಯ ರಸ್ತೆಯೂ ಅವಶ್ಯಕ. ಎಲ್ಲರೂ ತಮ್ಮ ಖಾಸಗಿ ಸ್ಥಳವನ್ನು ಬಿಟ್ಟಿದ್ದರಿಂದ ಸುಸಜ್ಜಿತ ರಸ್ತೆ ನಿರ್ಮಾಣ ಸಾಧ್ಯವಾಗಿದೆ . ಇದರಿಂದ ಹಲವು ವರ್ಷಗಳ ಕನಸು ನನಸಾಗಿದೆ ಎಂದರು.
ಕುರ್ನಾಡು ಗ್ರಾಮದ ಹೂವಿನಕೊಪ್ಪಲದಿಂದ ಮೈರಣಪಾದೆ,ಕಟ್ಟೆಮಾರು,ಕಿನ್ನಾಜೆ ಪ್ರದೇಶಗಳಿಗೆ ರಸ್ತೆಯ ಕೊರತೆ ಇದ್ದಾಗ,ಮೋಹನ್‍ದಾಸ್ ನಾೈಕ್,ದೇವಕಿ ಗಟ್ಟಿ,ವೆಂಕಪ್ಪ ಶೆಟ್ಟಿಗಾರ,ಅಬೆಮಾರು ಮನೆಯವರು,ದೇವಪ್ಪ ಮೂಲ್ಯ ಅಬೆಮಾರು,ಕುಂಞಣ್ಣ ಮೂಲ್ಯ ಮೈರಣಪಾದೆ,ದೂಮಪ್ಪ ಮೂಲ್ಯ ಮೈರಣಪಾದೆ,ಇವರೆಲ್ಲರ ಉದಾರವಾದ ಸ್ಥಳದಾನದಿಂದ ಹೂವಿನಕೊಪ್ಪಲ-ಕಿನ್ನಾಜೆ ರಸ್ತೆ ರಚನೆಯಾಗಿರುತ್ತದೆ.ಈ ಸಂದರ್ಭ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಸಂತೋಷ್ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು.
ಸ್ಥಳದಲ್ಲಿ ತಾಲೂಕ್ ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಗಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಶಿವಶಂಕರ ಭಟ್,ಗೋಪಾಲ ಮಿತ್ತಕೋಡಿ,ಸ್ಥಳದಾನಿ ದಿ.ದೂಮಪ್ಪ ಮೂಲ್ಯ ಇವರ ಮಕ್ಕಳಾದ ವೆಂಕಪ್ಪ ಕುಲಾಲ್,ಚಂದಪ್ಪ ಕುಲಾಲ್,ಮೋನಪ್ಪ ಕುಲಾಲ್,ಹಾಗೂ ದುರ್ಗಾವತಿ ಮೈರಣಪಾದೆ,ಹರಿಪ್ರಸಾದ್ ಕುಲಾಲ್ ಮೈರಣಪಾದೆ,ಗಣರಾಜ್ ಕಿನ್ನಾಜೆ,ಕೃಷ್ಣಪ್ಪ ಕುಲಾಲ್ ಮೈರಣಪಾದೆ,ಹರಿಪ್ರಸಾದ್ ಕಿನ್ನಾಜೆ,ಮಂಜುನಾಥ ಕುಲಾಲ್,ಯಮುನದೂಮಪ್ಪ ಮೂಲ್ಯ ಮತ್ತು ಮನೆಯವರು,ಪಿ.ಸೀತಾರಾಮ ಭಟ್,ವಿಶ್ವನಾಥ ಭಟ್,ನವೀನ್ ಚಂದ್ರ ಗಟ್ಟಿ,ಗುತ್ತಿಗೆದಾರ ನವೀನ್ ಶೆಟ್ಟಿ ಕೊಡಕ್ಕಲ್ಲು ಉಪಸ್ಥಿತರಿದ್ದರು.