UN NETWORKS

ಕೊಣಾಜೆ: ಕೊಣಾಜೆ ಬಳಿಯ ಮೂರು ಅಂಗಡಿಗಳ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ನುಗ್ಗಿ ನೂರು ರೂಪಾಯಿ ಹಾಗೂ ಎರಡು ಮೊಬೈಲ್ ಸೆಟ್‍ಗಳನ್ನು ಕದ್ದೊಯ್ದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಕೊಣಾಜೆಯ ಮಹಮ್ಮದ್ ಎಂಬವರ ಡಿ.ಎಚ್.ಸ್ಟೋರ್, ಸಫಾನ್ ಎಂಬವರ ಸಿ.ಎಂ.ಮೊಬೈಲ್ ಕ್ಲಿನಿಕ್ ಹಾಗೂ ಮಹಮ್ಮದ್ ಎಂಬವರ ಅಂಗಡಿಯ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ,
ಡಿ.ಎಚ್ .ಸ್ಟೋರ್‍ನಿಂದ ಅಂಗಡಿಯ ವಸ್ತುಗಳನ್ನು ಯಾವುದೇ ವಸ್ತುಗಳನ್ನು ಕಳವು ಮಾಡದೆ ಡ್ರಾವರ್‍ನಲ್ಲಿದ್ದ ನೂರು ರೂಪಾಯಿಯನ್ನು ಕಳವುಗೈದಿದ್ದಾರೆ. ಅಲ್ಲದೆ ಮೊಬೈಲ್ ಅಂಗಡಿಯಿಂದ ಗ್ರಾಹಕರು ರಿಪೇರಿಗೆಂದು ಕೊಟ್ಟಿದ್ದ ಎರಡು ಮೊಬೈಲ್ ಸೆಟ್ ಹಾಗೂ ಹೆಡ್‍ಫೋನ್‍ಗಳನ್ನು ಕಳವು ಗೈದಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಲ್ಯಾಪ್‍ಟಾಪ್‍ನಂತಹ ವಸ್ತುಗಳಿದ್ದರೂ ಕಳ್ಳರು ಬಿಟ್ಟುಹೋಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ಲದೆ ಇಲ್ಲೇ ಸಮೀಪದ ಮಹಮ್ಮದ್ ಎಂಬವರ ಚುರುಮುರಿ ಅಂಗಡಿಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರೂ ಯಾವುದೇ ವಸ್ತುಗಳ ಕಳವು ನಡೆಸಿಲ್ಲ.

ಅಂಗಡಿಯಲ್ಲಿ ಸಿಗರ್‍ಲೈಟ್ ಬಿಟ್ಟು ಹೋಗಿದ್ದರು!
ಮೂರು ಅಂಗಡಿಗಳಿಗೆ ಕಳ್ಳರು ಬಾಗಿಲು ಮುರಿದು ಒಳನುಗ್ಗಿದ್ದರೂ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಈ ನಡುವೆ ಡಿ.ಎಚ್,ಸ್ಟೋರ್‍ನಲ್ಲಿ ಎರಡು ಸಿಗರ್‍ಲೈಟನ್ನು ಬಿಟ್ಟು ಹೋಗಿದ್ದಾರೆ, ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.