


ಬೀರಿ : ತಾನು ದುಡಿಯುವ ಸೆಲೂನಿನ ಒಳಗಡೆಯೇ ಮಾಲೀಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ ಇಂದು ಸಂಭವಿಸಿದೆ.
ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಉಚ್ಚಿಲ ಲೀಸ್ ಮನೆಯಲ್ಲಿ ಕುಟುಂಬದೊAದಿಗೆ ನೆಲೆಸಿರುವ ಬೇಬೀಶ್ (49) ಆತ್ಮಹತ್ಯೆ ನಡೆಸಿದವರು. ಮನೆಮಂದಿಯ ಮೊಬೈಲ್ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರ ಸೆಲೂನ್ ಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸೆಲೂನಿನ ಕೆಳಗಿನ ಮಹಡಿಯಲ್ಲಿರುವ ಅಂಗಡಿಯಿAದ ಮಧ್ಯಾಹ್ನ ೩.೦೦ರ ಸುಮಾರಿಗೆ ಹೊಸ ಹಗ್ಗ ಖರೀದಿಸಿ ಕೃತ್ಯವೆಸಗಿದ್ದಾರೆ. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಬೇಬೀಶ್ ವಿದೇಶದಿಂದ ವಾಪಸ್ಸಾಗಿ ಬೀರಿ ಸಮೀಪ ಸೆಲೂನ್ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

